ಪಾಕ್​ಗೆ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ; ಬಾಬರ್ ಪಡೆಗೆ ಹ್ಯಾಟ್ರಿಕ್ ಮುಖಭಂಗ

Afghanistan
Published on

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯಗಳಿಸಿದೆ. ಅಫ್ಘಾನಿಸ್ತಾನದ ವಿರುದ್ಧ ಸೋಲುವ ಮೂಲಕ ಪಾಕಿಸ್ತಾನ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಮುಖಭಂಗ ಅನುಭವಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ನಅಯಕ ಬಾಬರ್ ಅಜಂ (74 ರನ್, 92 ಎಸೆತ, 4 ಬೌಂಡರಿ, 1 ಸಿಕ್ಸರ್), ಅಬ್ದುಲ್ಲ ಶಫಿಕ್​ (58 ರನ್, 75 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 282ರನ್​ ಗಳಿಸಿತ್ತು.

ಅಫ್ಘಾನಿಸ್ತಾನ ಪರ ನೂರ್​ ಅಹಮದ್​ (10-0-49-3), ನವೀನ್​ ಉಲ್​ ಹಕ್ (7-0-52-2), ಮೊಹಮ್ಮದ್​ ನಬಿ (10-0-31-1), ಅಜ್ಮತುಲ್ಲಾ ಓಮರ್​ಝೈ (5-0-50-1), ರಶೀದ್​ ಖಾನ್ (10-0-41-0), ಮುಜೀಬ್​ ಉರ್​ ರಹಮಾನ್ (8-0-55-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

283ರನ್​ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡವು ಆರಂಭಿಕರಾದ ಇಬ್ರಾಹಿಂ ಜರ್ದಾನ್ (85 ರನ್, 113 ಎಸೆತ, 10 ಬೌಂಡರಿ), ರೆಹಮಾನುಲ್ಲಾ ಗುರ್ಬಾಜ್ (65 ರನ್, 53 ಎಸೆತ, 9 ಬೌಂಡರಿ, 1 ಸಿಕ್ಸರ್), ರಹಮತ್​ ಷಾ (77 ರನ್, 84 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 49 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತ್ತು.

ಪಾಕಿಸ್ತಾನ ಪರ ಹಸನ್ ಅಲಿ (10-1-44-1), ಶಹೀನ್​ ಅಫ್ರಿದಿ (10-0-58-1), ಹ್ಯಾರಿಸ್​ ರೌಫ್ (8-1-53-0), ಉಸಾಮಾ ಮಿರ್ (8-0-55-0), ಶಾದಾಬ್ ಖಾನ್ (8-0-49-0), ಇಫ್ತಿಕಾರ್​ ಅಹಮದ್ (5-0-27-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net