More

    ಸರ್ವಾಂಗೀಣ ಪ್ರದರ್ಶನ; ನೆದರ್ಲೆಂಡ್​ ವಿರುದ್ಧ ಅಫ್ಘಾನಿಸ್ತಾನಕ್ಕೆ 7 ವಿಕೆಟ್​ಗಳ ಜಯ

    ಲಖನೌ: ಇಲ್ಲಿನ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ನೆದರರ್ಲೆಂಡ್​ ವಿರುದ್ಧ ಅಫ್ಘಾನಿಸ್ತಾನ 7 ವಿಕೆಟ್​ಗಳ ಜಯಗಳಿಸಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ತಂಡವು ಮದ್ಯಮ ಕ್ರಮಾಂಕದ ಬ್ಯಾಟ್ಸ್​​​ಮನ್ ಸಿಬ್ರಾಬ್ಡ್ ಎಂಗಲ್ಬ್ರೆಕ್ಟ್ (58 ರನ್, 86 ಎಸೆತ, 6 ಬೌಂಡರಿ), ಆರಂಭಿಕ ಮ್ಯಾಕ್ಸ್​ ಓಡೋವ್ಡ್​ (42 ರನ್, 40 ಎಸೆತ, 9 ಬೌಂಡರಿ) ನೆರವಿನಿಂದ 46.3 ಓವರ್​ಗಳಲ್ಲಿ 179ರನ್​ಗಳಿಗೆ ಆಲೌಟ್​ ಆಯಿತು.

    ಇದನ್ನೂ ಓದಿ: ಪೊಲೀಸರನ್ನು ಗುರಿಯಾಗಿಸಿ ಪಾಕ್​ನಲ್ಲಿ ಬಾಂಬ್ ದಾಳಿ; ಐದು ಮಂದಿ ಸಾವು

    ಅಫ್ಘಾನಿಸ್ತಾನ ಪರ ಮೊಹಮ್ಮದ್ ನಬಿ (9.3-1-28-3), ನೂರ್ ಅಹಮದ್ (9-0-31-2), ಮುಜೀಬ್​ ಉರ್​ ರೆಹಮಾನ್ (10-0-40-1), ರಶೀದ್​ ಖಾನ್ (10-0-31-0), ಫಜಲ್​ಹಕ್​ ಫಾರೂಕಿ (5-0-36-0), ಅಜ್​ಮತುಲ್ಲಾ ಓಮರ್​ಝೈ (3-0-11-0) ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡವು ನಾಯಕ ಹಶ್​ಮತುಲ್ಲಾ ರಹಮತ್​ (56 ರನ್, 64 ಎಸೆತ, 6 ಬೌಂಡರಿ), ರಹಮತ್​ ಷಾ (52 ರನ್, 54 ಎಸೆತ, 8 ಬೌಂಡರಿ) ಅರ್ಧಶತಕಗಳ ಫಲವಾಗಿ 3 ವಿಕೆಟ್​ ನಷ್ಟಕ್ಕೆ 31.3 ಓವರ್​ಗಳಲ್ಲಿ 181 ರನ್​ ಪೇರಿಸಿ ಜಯದ ನಗೆ ಬೀರಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts