More

    VIDEO| ಪಾಕ್​ ವಿರುದ್ಧ ಜಯ; ಅಫ್ಘಾನಿಸ್ತಾನದಲ್ಲಿ ಮುಗಿಲುಮುಟ್ಟಿದ ಸಂಭ್ರಮಾಚರಣೆ

    ಕಾಬುಲ್: ಚೆನ್ನೈನ ಚೆಪಾಕ್​ ಕ್ರಿಕೆಟ್​ ಮೈದಾನದಲ್ಲಿ ಸೋಮವಾರ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನವನ್ನು ಮಣಿಸುವ ಮೂಲಕ ಐತಿಹಾಸಿಕ ಜಯಭೇರಿ ಬಾರಿಸಿದೆ.

    ಇತ್ತ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ ಮೊದಲ ಜಯ ಸಾಧಿಸುತ್ತಿದ್ದಂತೆ ಅತ್ತ ರಾಜಧಾನಿ ಕಾಬುಲ್​ನಲ್ಲಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿತ್ತು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಾಕಿಸ್ತಾನ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನದ ಬೀದಿಗಳಲ್ಲಿ ಮಕ್ಕಳು, ಹಿರಿಯರು ಸೇರಿದಂತೆ ಅನೇಕರು ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ರಾಷ್ಟ್ರೀಯ ತಂಡವು ಏಕದಿನ ವಿಶ್ವಕಪ್ ಗೆದ್ದಂತೆ ಅಫ್ಘಾನಿಸ್ತಾನದ ಜನರು ಸಂಭ್ರಮಿಸಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲಂಡ್​ ವಿರುದ್ಧ ವಿಶ್ವಕಪ್​ನಲ್ಲಿ ಗೆಲುವಿನ ನಂತರ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ ಬಾರಿ ಅಂತರದಲ್ಲಿ ಜಯಿಸಿದೆ. ರಾಜಧಾನಿ ಕಾಬೂಲ್ ಮತ್ತು ಯುದ್ಧ ಪೀಡಿತ ದೇಶದ ಇತರ ಭಾಗಗಳಲ್ಲಿ ಅಭೂತಪೂರ್ವ ದೃಶ್ಯಗಳು ಕಂಡುಬಂದವು.

    ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ ಪ್ರಿಯಕರ; ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರೇಯಸಿ

    ಪಾಕ್​ ಹಾದಿ ಕಠಿಣ

    ಸೋಮವಾರ ಚೆನ್ನೈನ ಚೆಪಾಕ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು 8 ವಿಕೆಟ್​ಗಳ ಭರ್ಜರಿ ಜಯಗಳಿಸಿತ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ನಅಯಕ ಬಾಬರ್ ಅಜಂ (74 ರನ್, 92 ಎಸೆತ, 4 ಬೌಂಡರಿ, 1 ಸಿಕ್ಸರ್), ಅಬ್ದುಲ್ಲ ಶಫಿಕ್​ (58 ರನ್, 75 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 282ರನ್​ ಗಳಿಸಿತ್ತು.

    283ರನ್​ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡವು ಆರಂಭಿಕರಾದ ಇಬ್ರಾಹಿಂ ಜರ್ದಾನ್ (85 ರನ್, 113 ಎಸೆತ, 10 ಬೌಂಡರಿ), ರೆಹಮಾನುಲ್ಲಾ ಗುರ್ಬಾಜ್ (65 ರನ್, 53 ಎಸೆತ, 9 ಬೌಂಡರಿ, 1 ಸಿಕ್ಸರ್), ರಹಮತ್​ ಷಾ (77 ರನ್, 84 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 49 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts