More

    ಮಾನವೀಯ ಆಧಾರದ ಮೇಲೆ ಇಬ್ಬರು ಹಿರಿಯ ನಾಗರೀಕರನ್ನು ಬಿಡುಗಡೆ ಮಾಡಿದ ಹಮಾಸ್​

    ನವದೆಹಲಿ: ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಹಿರಿಯ ನಾಗರೀಕರನ್ನು ಮಾನವೀಯ ಆಧಾರದ ಮೇಲೆ ಹಮಾಸ್ ಉಗ್ರರು ಸೋಮವಾರ ಬಿಡುಗಡೆ ಮಾಡಿದ್ದಾರೆ.

    ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಹಮಾಸ್ ಉಗ್ರರ ಗುಂಪು ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆಯ ನಂತರ ಮಾನವೀಯ ಆಧಾರದ ಮೇಲೆ ಒತ್ತೆಯಾಳಗಿ ಇರಿಸಿಕೊಂಡಿದ್ದ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡಿರುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಅಧಿಕಾರಿಗಳು ಇದುವರೆಗೂ ಯಾವುದೇ ದೃಢೀಕರಣವನ್ನು ನೀಡಿಲ್ಲ. ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ಮೂಲಕ ಒತ್ತೆಯಾಳುಗಳನ್ನು ಕಳಿಸಿಕೊಡಲಾಗಿದೆ ಎಂದು ಇಸ್ರೇಲಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ, ಇಸ್ರೇಲ್​ ಇತಚತೀಚಿಗೆ ಬಿಡುಗಡೆ ಮಾಡಿರುವ ಇಬ್ಬರು ಒತ್ತೆಯಾಳುಗಳನ್ನು ಸ್ವೀಕರಿಸಲು ತಯಾರಿಲ್ಲ ಎಂದು ಹಮಾಸ್​ ಉಗ್ರರ ಗುಂಪು ಆರೋಪಿಸಿದೆ.

    hamas

    ಇದನ್ನೂ ಓದಿ: ಮೈಸೂರು ದಸರಾ 2023| ಬರಗಾಲದಲ್ಲೂ ಜನ ಸಂತೋಷವಾಗಿದ್ದಾರಲ್ಲಾ ಎಂಬುದೇ ಖುಷಿ: ಸಿಎಂ ಸಿದ್ದರಾಮಯ್ಯ

    ಅಕ್ಟೋಬರ್ 7 ರಂದು ಹಮಾಸ್​, ಇಸ್ರೇಲ್ ಮೇಲೆ ದಾಳಿ ಮಾಡಿ ಕೆಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಅದಕ್ಕೆ ಇಸ್ರೇಲ್​ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಹಮಾಸ್ ಭಯೋತ್ಪಾದಕರ ಮೇಲೆ ನೆಲ ಮತ್ತು ವಾಯು ದಾಳಿಯನ್ನು ಇಸ್ರೇಲ್​ ಸೇನೆ ಮುಂದುವರೆಸಿದೆ. ಈವರೆಗೆ ಇಸ್ರೇಲ್​ನ 222 ಮಂದಿಯನ್ನು ಹಮಾಸ್​ ಉಗ್ರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.

    ಹಮಾಸ್ ದಾಳಿಯಿಂದ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದು, ಹಮಾಸ್​ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ 4,000ಕ್ಕೂ ಹೆಚ್ಚು ಜನರು ಎರಡೂ ಕಡೆಗಳಿಂದ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts