ಆರೋಗ್ಯಕರ ಸಮಾಜ ಕಟ್ಟುವ ಕೆಲಸವಾಗಬೇಕು : ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಮತ

New Project (17)
Published on

ಗುರುಪುರ: ದೇವಾಲಯದ ಬ್ರಹ್ಮಕಲಶೋತ್ಸವ ಪಾವಿತ್ರ್ಯತೆಯ ಕೆಲಸವಾಗಿದ್ದು, ಈ ಮೂಲಕ ಆರೋಗ್ಯಕರ ಸಮಾಜ ಕಟ್ಟುವ ಹಾಗೂ ಎಲ್ಲ ವರ್ಗದವರು ಸೇರಿ ಭವ್ಯ ಭಾರತ ಕಟ್ಟುವ ಕೆಲಸವಾಗಬೇಕು. ಇದರೊಂದಿಗೆ ಮುಂದಿನ ಪೀಳಿಗೆಗೆ ಅತ್ಯುತ್ತಮ ಸಮಾಜ ರೂಪಿಸಿ ಕೊಡುವ ಗುರುತರವಾದ ಜವಾಬ್ದಾರಿ ನಮ್ಮಲ್ಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಬ್ರಹ್ಮಕಲಶೋತ್ಸವದ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ದೈವ-ದೇವರ ಕಾರ್ಯಕ್ರಮಗಳಲ್ಲಿ ಪಾಲು ಪಡೆಯುವ ಅವಕಾಶ ಕರಾವಳಿ ರಾಜಕಾರಣಿಗಳಿಗೆ ಸಿಕ್ಕಿರುವುದು ಪುಣ್ಯದ ಕೆಲಸ. ಇಲ್ಲಿನ ಪ್ರತಿ ಕಲ್ಲು, ಮನಸ್ಸಿನಲ್ಲಿ ದೇವರಿದ್ದಾನೆ. ಹಿಂದು ಸಮಾಜ ಒಂದಾಗುವ ಕಾಲಘಟ್ಟ ನಮ್ಮ ಮುಂದಿದೆ ಎಂದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಮಾತನಾಡಿದರು. ಬ್ರಹ್ಮಶ್ರೀ ನರಸಿಂಹ ತಂತ್ರಿ ಹಾಗೂ ಗಣ್ಯರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜೀತ್ ಆಳ್ವ ಬೈಲು ಏತಮೊಗರುಗುತ್ತು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನರಸಿಂಹ ತಂತ್ರಿ, ದೇವಸ್ಥಾನ ಪವಿತ್ರಪಾಣಿ ರಮೇಶ್ ಉಡುಪ ಮತ್ತಿತರರನ್ನು ಸನ್ಮಾನಿಸಲಾಯಿತು. ಸುಜೀತ್ ಆಳ್ವ ಬೈಲು ಏತಮೊಗರುಗುತ್ತು ಮತ್ತು ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಅವರನ್ನು ಗೌರವಿಸಲಾಯಿತು. ವಿದ್ವಾನ್ ಹರಿದಾಸ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಡಾ. ಭರತ್ ಶೆಟ್ಟಿ, ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್, ಕರ್ನಾಟಕ ಪ್ರಾಂತ ವಿಶ್ವಹಿಂದು ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮುಂಬೈ ಉದ್ಯಮಿ ವಿಜಯ್ ಆರ್. ಭಂಡಾರಿ ಬೈಲು ಮೂಡುಕರೆಗುತ್ತು, ಮುಂಬೈ ಉದ್ಯಮಿ ಕುಸುಮಾಧರ ಡಿ. ಶೆಟ್ಟಿ, ಬೆಂಗಳೂರು ಉದ್ಯಮಿ ರಾಜದತ್ತ, ಅದಾನಿ ಸಂಸ್ಥೆಯ ಹಿರಿಯ ಅಧಿಕಾರಿ ಕಿಶೋರ್ ಆಳ್ವ, ಮುಂಬೈ ಉದ್ಯಮಿ ಕರುಣಾಕರ ಆಳ್ವ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ ಸಂಕೇಶ ಅದ್ಯಪಾಡಿ(ನವಮುಂಬೈ), ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬೈಲು ಮೇಗಿನಮನೆ ನಾಗರಾಜ ಶೆಟ್ಟಿ, ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ದೋಹ ಕತಾರ್, ಮನೋಹರ ಶೆಟ್ಟಿ ನಂದ್ಯಬೆಟ್ಟು, ಸತೀಶ್ ಆಳ್ವ ಮುಡಾರೆ, ನಾರಾಯಣ ಪೂಜಾರಿ ಬಂಟಸಾನ, ಶ್ರೀಪತಿ ಉಡುಪ, ಉದ್ಯಮಿ ಪುರುಷೋತ್ತಮ ಭಂಡಾರಿ, ಸುಕೇಶ್ ಮಾಣೈ, ವಿನಯಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ವಸಂತ್ ಕೆ. ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕಂದಾವರ ನಿರೂಪಿಸಿದರು.

ರಾತ್ರಿ 7:30ರಿಂದ ಚಾ- ಪರ್ಕ ಕಲಾವಿದರಿಂದ ದೇವಿದಾಸ್ ಕಾಪಿಕಾಡ್ ನಿರ್ದೇಶನದ ‘ಪುದರ್ ದೀತಿಜಿ’ ತುಳು ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net