ಪಡುಬೈಲು ದೈವಸ್ಥಾನಕ್ಕೆ ಬೆಳ್ಳಿ ಅಣಿ ಸಮರ್ಪಣೆ

New Project (10)
Published on

ಮೂಲ್ಕಿ: ಪಡುಬೈಲು ಶ್ರೀ ಕೋರ‌್ದಬ್ಬು ದೈವಸ್ಥಾನಕ್ಕೆ ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಿದ ನೂತನ ಬೆಳ್ಳಿ ಅಣಿ ಸಮರ್ಪಣೆಯ ಮೆರವಣಿಗೆ ಗ್ರಾಮ ದೇವರಾದ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದಿಂದ ಪಡುಬೈಲು ಶ್ರೀ ಕೋರ‌್ದಬ್ಬು ದೈವಸ್ಥಾನದವರೆಗೆ ನಡೆಯಿತು.

ಕಾರ್ನಾಡು ಶ್ರೀ ಹರಿಹರ ಕ್ಷೇತ್ರದಲ್ಲಿ ಅರ್ಚಕ ರಾಜಾರಾಮ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೂಲ್ಕಿ ನ.ಪಂ. ಸದಸ್ಯರಾದ ಹರ್ಷರಾಜ ಶೆಟ್ಟಿ ಜಿ.ಎಂ., ರಾಧಿಕಾ ಯಾದವ ಕೋಟ್ಯಾನ್, ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಗುರಿಕಾರರಾದ ದೇವಪ್ಪ, ಭಾಸ್ಕರ್, ಉದ್ಯಮಿ ಜೀವನ್ ಶೆಟ್ಟಿ ಕಾರ್ನಾಡ್, ಪ್ರವೀಣ್ ಕೋಟ್ಯಾನ್ ಕಾರ್ನಾಡ್ ಧರ್ಮಸ್ಥಾನ, ದೀಪಕ್ ಪಡುಬೈಲು, ಶ್ರೀ ಕೋರ‌್ದಬ್ಬ್ಬು ದೈವಸ್ಥಾನದ ಗುರಿಕಾರರು, ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ಯುವಕ ವೃಂದ ಹಾಗೂ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net