ಅದ್ಯಪಾಡಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ : ಸಮಿತಿ ಪ್ರಮುಖರ ಸಮಾಲೋಚನಾ ಸಭೆ

New Project (17)
Published on

ಗುರುಪುರ: ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 9ರಿಂದ 25ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಆಮಂತ್ರಣ ಪತ್ರಿಕೆ ವಿತರಣೆ, ಹಸಿರು ಹೊರೆಕಾಣಿಕೆ ಸಂಗ್ರಹ ವಿಷಯದಲ್ಲಿ ಮಂಗಳವಾರ ದೇವಸ್ಥಾನದ ಸಭಾಗೃಹದಲ್ಲಿ ವಿವಿಧ ಸಮಿತಿಗಳ ಪ್ರಮುಖರ ಸಭೆ ನಡೆಯಿತು.

ವ್ಯಾಪ್ತಿ ಪ್ರದೇಶದ ಬಹುತೇಕ ಎಲ್ಲ ಗ್ರಾಮಗಳಿಗೆ ಆಮಂತ್ರಣ ಪತ್ರಿಕೆ ವಿತರಿಸಲಾಗಿದ್ದು, ಇನ್ನುಳಿದ ಕೆಲವು ಗ್ರಾಮ, ಪ್ರಮುಖರಿಗೆ ಪತ್ರಿಕೆ ನೀಡುವ ಕೆಲಸ ಬಾಕಿ ಉಳಿದಿದೆ. ಹಸಿರು ಹೊರೆಕಾಣಿಕೆ ಸಂಗ್ರಹ ವಿಷಯದಲ್ಲಿ ಹಲವು ಗ್ರಾಮಗಳ ಪ್ರಮುಖರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ದೇವಾಲಯ ರಕ್ಷಕ ಮನೆತನದ ರಮಾನಾಥ ಅತ್ತಾರ್ ಏತಮೊಗರುಗುತ್ತು ತಿಳಿಸಿದರು.

ಸಭೆಯಲ್ಲಿ 6 ಸಮಿತಿ ರಚಿಸಲಾಯಿತು. ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು ಮಾಹಿತಿ ನೀಡಿದರು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜೀತ್ ಆಳ್ವ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕಂದಾವರ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಅಶ್ವಿನ್ ಬಲ್ಲಾಳ್ ಬೈಲುಬೀಡು, ಹರಿಪ್ರಸಾದ್ ರೈ ಬೆಳ್ಳಿಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಸುಕೇಶ್ ಮಾಣೈ, ಬೀಬಿಲಚ್ಚಿಲ್ ಕರ್ಣಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಅವಿನಾಶ್ ಮೊದಲಾದವರಿದ್ದರು. ವಸಂತ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net