More

  ಅನುದಾನ ಸದುಪಯೋಗಕ್ಕೆ ಸಲಹೆ

  ವಿಜಯಪುರ: ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು 20 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಕಾಯ್ದಿರಿಸಿದ್ದಾರೆ.

  ಜೊತೆಗೆ ಪಾಲಿಕೆ ಅನುದಾನದಲ್ಲಿರೂ ಒಂದು ಕೋಟಿ ರೂ. ಮೀಸಲಿಡಲಾಗಿದ್ದು ಬೀದಿ ಬದಿ ವ್ಯಾಪಾರಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ವಿಭಾಗ ಅಧ್ಯಕ್ಷ ಡಾ. ಸಿ.ಇ. ರಂಗಸ್ವಾಮಿ ಹೇಳಿದರು.

  ನಗರದ ಕಾಂಗ್ರೆಸ್​ ಜಿಲ್ಲಾ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಸ್ಥಳದಲ್ಲಿ ಚಿಕ್ಕಮಳಿಗೆ ಮತ್ತು ತಳ್ಳು ಗಾಡಿಗಳನ್ನು ನೀಡಲು ಅನುದಾನ ಕಾಯ್ದಿರಿಸಿದ್ದಾರೆ.

  ಇಂಥ ಜನಪರ ಯೋಜನೆಗಳು ಜಾರಿಗೆ ಬರುವುದು ಕಾಂಗ್ರೆಸ್​ನಿಂದ ಮಾತ್ರವೇ ಸಾಧ್ಯ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಾಜು ಆಲಗೂರ ಗೆಲುವಿಗೆ ಬೆಂಬಲಿಸಿ ಹಾಗೂ ತಮ್ಮ ಬಳಿ ಬರುವ ಗ್ರಾಹಕರ ಮನವೊಲಿಸಿ ಎಂದು ತಿಳಿಸಿದರು.

  ರಾಜ್ಯ ಉಪಾಧ್ಯಕ್ಷ ಮಣಿಗೌಡ, ಲಾಲಸಾಬ ಕೊರಬು, ಸಾಹೇಬಗೌಡ ಬಿರಾದಾರ ಮತ್ತು ಜಿಲ್ಲಾ ಕಾಂಗ್ರೆಸ್​ ಉಪಾಧ್ಯಕ್ಷ ಸುಭಾಷ ಕಾಲೇಬಾಗ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

  ಅಬ್ದುಲ್​ ಸತ್ತಾರ ಬಾಗವಾನ, ಮೈಬೂಬ ವಾಟಿ, ರಮಜಾನ ಶೇಖ, ಅನೀಲ ಚವಾಣ, ಮೈಬೂಬ ಜಾಗಿರದಾರ, ಜುಮ್ಮಣ್ಣ ತಾಳಿಕೋಟಿ, ಚಾಂದಸಾಬ ದೇಸಾಯಿ, ಶರಣಮ್ಮ ನಾಯಕ, ಸಿದ್ದು ಹಡಪದ, ಜಯರಾಬಿ ಚೌದರಿ, ಎಂ.ಎಂ. ಮುಲ್ಲಾ, ಫಿರೋಜ ಶೇಖ, ಸೋಮಣ್ಣ ತಳವಾರ, ಕೃಷ್ಣಾ ಲಮಾಣಿ, ಸಂತೋಷ ಬಾಲಗಾಂವಿ, ಮಹಾದೇವ ಜಾಧವ, ಎ.ಆರ್​. ಕಂಬಾಗಿ, ಜಯಪ್ರಭು ಕೊಳಮಲಿ, ಭೀಮರಾಯ ಸೀತಿಮನಿ, ಮಹಾಲಿಂಗ ಕೆಂಗಲಗುತ್ತಿ, ರಮೇಶ ಪೂಜಾರಿ, ಶಾಂತವ್ವ ಹೊಸಮನಿ, ಅಬ್ದುಲ್​ಪೀರಾ ಜಮಖಂಡಿ, ಬಸಪ್ಪ ಕೋಲಕಾರ ಮತ್ತಿತರರಿದ್ದರು.

  ನಗರದ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಶುಕ್ರವಾರ ಹಿಂದುಳಿದ ವರ್ಗಗಳ ವಿಭಾಗದ ಸಭೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧ್ಯಕ್ಷ ಸಾಹೇಬಗೌಡ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ ಗೆಲುವಿಗೆ ಹಿಂದುಳಿದ ವರ್ಗಗಳ ವತಿಯಿಂದ ಶ್ರಮಿಸಬೇಕೆಂದು ಕರೆ ನೀಡಿದರು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಉಪ್ಪಾರ, ಸತೀಶ ಅಡವಿ, ಕಾರ್ಯದರ್ಶಿ ಶ್ರೀಶೈಲ ವಾಲಿಕಾರ, ಅಶೋಕ ಜೈನಾಪೂರ, ದೇವೇಂದ್ರ ವಾಲಿಕಾರ, ಭೀಮರಾಯ ಸೀತಿಮನಿ, ಶಾಂತಪ್ಪ ಹೊಸಮನಿ, ಬೀರಪ್ಪ ಜುಮನಾಳ, ನಿಂಗಪ್ಪ ರೆಬಿನಾಳ, ಸುರೇಶ ಪೂಜಾರಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts