ತಾಳಿಕೋಟೆ ಪಟ್ಟಣದಲ್ಲಿ 17 ರಂದು ಶಿರಡಿ ಸಾಯಿಬಾಬಾ ಜಯಂತಿ

Shirdi Saibaba, Talikote, Dr. L. N. Shetty, Cradle Service, Kathamrita,
ತಾಳಿಕೋಟೆ ಪಟ್ಟಣದಲ್ಲಿ ಶಿರಡಿ ಸಾಯಿಬಾಬಾ ಜಯಂತಿ ಪೂರ್ವಭಾವಿ ಸಭೆಯಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಡಾ.ಎಲ್.ಎನ್.ಶೆಟ್ಟಿ ಮಾತನಾಡಿದರು. ಬಸವರಾಜ ಮದರಕಲ್ಲ, ಎಂ.ಜಿ.ಪಾಟೀಲ, ಸಿ.ಬಿ.ತಿಳಗೂಳ ಇತರರಿದ್ದರು.
Published on

ತಾಳಿಕೋಟೆ: ಸ್ಥಳೀಯ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ವತಿಯಿಂದ ಶಿರಡಿ ಸಾಯಿಬಾಬಾ ಜಯಂತಿ ಹಾಗೂ 20ನೇ ವಾರ್ಷಿಕೋತ್ಸವ ಏ.17 ರಂದು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಡಾ.ಎಲ್.ಎನ್.ಶೆಟ್ಟಿ ಹೇಳಿದರು.

ಪಟ್ಟಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಏ.17 ರಂದು ಶಿರಡಿ ಸಾಯಿಬಾಬಾ ಜಯಂತ್ಯುತ್ಸವ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 7 ಗಂಟೆಗೆ ನಿಮಿಷಾಂಬಾ ದೇವಿ ಮಂದಿರದಿಂದ ವಾಸವಿ ಕಲ್ಯಾಣ ಮಂಟಪದವರೆಗೆ ಮಹಾ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗುವುದು. 9.15 ಗಂಟೆಗೆ ಪ್ರಾರ್ಥನೆ, 9.30 ಗಂಟೆಗೆ ಸಾಯಿಬಾಬಾಗೆ ಮಹಾ ಪೂಜೆ ಹಾಗೂ ಪಂಚಾಮೃತ ಅಭಿಷೇಕ ಜರುಗುವುದು ಎಂದು ಹೇಳಿದರು.

10.30 ಗಂಟೆಗೆ ಸಾಯಿಬಾಬಾ ತೊಟ್ಟಿಲು ಸೇವೆ, 11.45 ಗಂಟೆಗೆ ಸಾಯಿ ಬಾಬಾ ಭಜನಾ ಕಾರ್ಯಕ್ರಮ ಜರುಗುವುದು. 11.45 ಗಂಟೆಯಿಂದ ಸಾಯಿ ಭಕ್ತರಿಂದ ಸಂಗೀತ ಸೇವೆ ಜರುಗುವುದು. 12.30 ಗಂಟೆಗೆ ವೇ.ಸಂತೋಷಭಟ್ ಜೋಶಿ ಅವರಿಂದ ಸಾಯಿ ಕಥಾಮೃತ ಜರುಗುವುದು. 1.30 ಗಂಟೆಗೆ ಮಹಾ ಮಂಗಳಾರತಿ ಜರುಗುವುದು. 2 ಗಂಟೆಗೆ ಭಕ್ತರಿಗೆ ಮಹಾ ಪ್ರಸಾದ ಜರುಗುವುದು ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಬಸವರಾಜ ಮದರಕಲ್ಲ, ಉಪಾಧ್ಯಕ್ಷ ಎಂ.ಜಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿ.ಬಿ.ತಿಳಗೂಳ, ಸದಸ್ಯರಾದ ಜಿ.ಟಿ.ಘೋರ್ಪಡೆ, ಡಿ.ಕೆ.ಲೋಕರೆ, ಜಿ.ಜಿ.ಕಾದಳ್ಳಿ, ಕೆ.ಸಿ.ಸಜ್ಜನ, ಸುಭಾಸಚಂದ್ರ ಸಾಲಂಕಿ, ಶಿವಲಿಂಗ ಸಾಲಂಕಿ, ಸತೀಶರಾವ್ ದಪ್ತೆದಾರ, ಕೆ.ಆರ್.ಪಾಟೀಲ ಹಾಗೂ ಆನಂದ ಕುಲಕರ್ಣಿ, ಜಾನಕಿಬಾಯಿ ರಂಗಸುಭೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net