More

    ಸಾಂಭಪ್ರಭು ಶರಣಮುತ್ಯಾರ ಮಠಕ್ಕೆಬುತ್ತಿ ಸಮರ್ಪಣೆ

    ತಾಳಿಕೋಟೆ: ಸ್ಥಳೀಯ ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಅಂಕಲಿ ಗುರು ನಿರುಪಾದೀಶ್ವರರ ಮಹಾ ಪುರಾಣ ಪ್ರವಚನದ ಸನ್ನಿವೇಶದಂತೆ ಬುಧವಾರ ಭಕ್ತರಿಂದ ಸಾಂಭಪ್ರಭು ಶರಣಮುತ್ಯಾರ ಮಠಕ್ಕೆ ಶರಣಬುತ್ತಿ ಸಮರ್ಪಿಸುವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.
    ಕರಿಭಾವಿಯ ಭಕ್ತ ಸಮೂಹ ಹಾಗೂ ತಾಳಿಕೋಟೆ ಪಟ್ಟಣ ಒಳಗೊಂಡು ವಿವಿಧ ಗ್ರಾಮಗಳ ಭಕ್ತರು, ಸುಮಂಗಲೆಯರು ಶರಣರ ಬುತ್ತಿ ಸಮರ್ಪಿಸುವ ಕಾರ್ಯ ಮಾಡಿದರು.

    ಸಾಂಭ ಪ್ರಭು ಶರಣಮುತ್ಯಾರವರ ಮಠದಲ್ಲಿ ಉಭಯ ಗ್ರಾಮ, ಪಟ್ಟಣದವರು ತಂದು ಇರಿಸಲಾದ ಶರಣಬುತ್ತಿ ಗಂಟುಗಳನ್ನು ಸಂಜೆ 5 ಗಂಟೆಗೆ ಶರಣರ ಮಠದಿಂದ ಶರಣಬುತ್ತಿ ಸಮರ್ಪಿಸುವ ಜಾತ್ರೋತ್ಸವವನ್ನಾಗಿ ಮಾರ್ಪಡಿಸಿ ಶ್ರೀಮಠದಿಂದ ಭವ್ಯ ಮೆರವಣಿಗೆಗೆ ಶ್ರೀಮಠದ ಬಸಣ್ಣ ಶರಣರು, ಶರಣಪ್ಪ ಶರಣರು ಚಾಲನೆ ನೀಡಿದರು.

    ಮೆರವಣಿಯುದ್ದಕ್ಕೂ ಕರಿಭಾವಿಯಿಂದ ಆಗಮಿಸಿದ 8- 10 ಎತ್ತಿನ ಬಂಡಿಗಳಲ್ಲಿ ಇರಿಸಲಾದ ಶರಣಬುತ್ತಿ ಗಂಟುಗಳು ಹಾಗೂ ಅದೇ ಊರಿನ 6- 7 ಟ್ಯಾಕ್ಟರ್‌ಗಳಲ್ಲಿ ಇರಿಸಲಾದ ಶರಣಬುತ್ತಿ ಗಂಟುಗಳು, ಅಂದಾಜು 200 ಕ್ಕಿಂತಲೂ ಹೆಚ್ಚು ಮಹಿಳೆಯರು ತಮ್ಮ ತಲೆಯ ಮೇಲೆ ಬುತ್ತಿಗಂಟುಗಳನ್ನು ಇಟ್ಟುಕೊಂಡು ಪಾಲ್ಗೊಂಡಿದ್ದರು.

    ವಿವಿಧ ವಾದ್ಯ ವೈಭವಗಳೊಂದಿಗೆ ಶರಣರ ಭಾವಚಿತ್ರ ಹಾಗೂ ನಿರುಪಾದೀಶ್ವರರ ಭಾವಚಿತ್ರ, ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ಕೆಲವು ಮಕ್ಕಳು ದೇವಾದಿ ದೇವತೆಗಳ ವೇಷ-ಭೂಷಣದಲ್ಲಿ ಗಮನ ಸೆಳೆದರು. ಶರಣ ಶರಣೇಯರು ಮತ್ತು ಸ್ವಾಮಿ ವಿವೇಕಾನಂದರ ವೇಷ ಭೂಷಣಗಳನ್ನು ಧರಿಸಿದ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಕೂಡಿಸಿ ಮೆರವಣಿಗೆ ಮಾಡಲಾಯಿತು.

    ಸಾಂಭಪ್ರಭು ಶರಣಮುತ್ಯಾರವರ ಮಂದಿರಕ್ಕೆ ತೆರಳಿ ಎಲ್ಲ ಬುತ್ತಿಯ ಗಂಟುಗಳನ್ನು ಸಮರ್ಪಿಸಲಾಯಿತು. ನಂತರ ನಡೆದ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ.ಸುವರ್ಣಅಕ್ಕನವರು, ಬಿ.ಕೆ.ಕಾಶಿಬಾಯಿ ಅಜ್ಜಿ, ಶರಣೆ ಕಾಶಿಬಾಯಿ, ಕಾಶಿಬಾಯಿ ಶರಣರ, ಪ್ರೇಮಾಬಾಯಿ ದೇಗಿನಾಳ, ಬಿ.ಕೆ.ಬಸವರಾಜ, ಬಿ.ಕೆ.ಪಾರ್ವತಿ, ಬಿ.ಕೆ.ರತ್ನಾ, ಸಿದ್ದನಗೌಡ ಪೊಲೀಸ್‌ಪಾಟೀಲ (ಕರಿಭಾವಿ), ಬಂಡೆಪ್ಪಗೌಡ ಬಿರಾದಾರ, ಸಿದ್ದಣ್ಣ ಶರಣರ ಹಾಗೂ ಕಾಶಿರಾಯ ದೇಸಾಯಿ (ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಬಾರ ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ ಇತರರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಶರಣರ ಬುತ್ತಿಯನ್ನು ಮಹಾ ಪ್ರಸಾದವೆಂದು ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts