More

    ಬಿಳೇಭಾವಿ ಗ್ರಾಮದಲ್ಲಿ ಆರಾಧನಾ ಮಹೋತ್ಸವ

    ತಾಳಿಕೋಟೆ: ಹುಣಶಿಹೊಳೆಯ ಕಣ್ವಮಠದ ಪೀಠಾಧಿಕಾರಿ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಮಾಧವತೀರ್ಥ ಮೂಲ ಮಹಾ ಸಂಸ್ಥಾನಂ ಶ್ರೀಮತ್ ಕಣ್ವಮಠ (ವೀರಘಟ್ಟ) ಮಹಾ ಸಂಸ್ಥಾನ ಹುಣಸಿಹೊಳೆ ಪರಂಪರೆಯಲ್ಲಿ 4ನೇ ಪೀಠಸ್ಥರಾದ ವಿಧ್ಯಾನಿಧಿ ತೀರ್ಥರ 160ನೇ ಆರಾಧನಾ ಮಹೋತ್ಸವ ತಾಲೂಕಿನ ಬಿಳೇಭಾವಿ ಗ್ರಾಮದಲ್ಲಿ ಮಾ.30 ರಿಂದ ಏ.1 ರವರೆಗೆ ಜರುಗಲಿದೆ.

    ಶ್ರೀಮತ್ ಕಣ್ವಮಠದ 2ನೇ ಹಾಗೂ 4ನೇ ಯತಿಗಳಾದ ಅಕ್ಷೋಭ್ಯತೀರ್ಥರು ಹಾಗೂ ವಿದ್ಯಾನಿಧಿ ತೀರ್ಥರ ವೃಂದಾವನಗಳು ತಾಳಿಕೋಟೆ ತಾಲೂಕಿನ ಬಿಳೇಭಾವಿ ಗ್ರಾಮದಲ್ಲಿವೆ.

    ಮಾ.30 ರಂದು ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ 5 ಗಂಟೆಗೆ ಸುಪ್ರಭಾತ ಧರ್ಮ ಧ್ವಜಾರೋಹಣ, ವೇದಘೋಷ, ಯತಿಗಳ ವೃಂದಾವನಗಳಿಗೆ ಅಭಿಷೇಕ ಅಲಂಕಾರ, ತೀರ್ಥ ಪ್ರಸಾದ ಹಾಗೂ ಮಂಗಳಾರತಿ ಜರುಗುವುದು.

    ಮಾ.31 ರಂದು ಮಧ್ಯಾರಾಧನೆ ನಿಮಿತ್ತ ಸುಪ್ರಭಾತ, ವೇದಘೋಷ, ವೃಂದಾವನಗಳಿಗೆ ಅಭಿಷೇಕ ಅಲಂಕಾರ, ಲಕ್ಷ ಪುಷ್ಪಾರ್ಚನೆ, ಅನುಪಮಾ ಅಂಬಾದಾಸ ಜೋಶಿ ಅವರಿಂದ ದಾಸವಾಣಿ, ಧರ್ಮಾಚರಣೆ ಕುರಿತು ನೀಲಕಂಠರಾವ್ ತಲೇಖಾನ ಅವರಿಂದ ಅನಿಸಿಕೆ, ಶ್ರೀ ಶುಕ್ಲ ಯಜುರ್ವೇದ ಪರಂಪರೆಯ ಶ್ರೀಮತ್ ಕಣ್ವಮಠದ ಪೀಠಾಧಿಪತಿ ವಿದ್ಯಾಕಣ್ವ ವಿರಾಜತೀರ್ಥರಿಂದ ಸಂಸ್ಥಾನಪೂಜೆ, ಶ್ರೀಗಳಿಂದ ಅನುಗ್ರಹ ಸಂದೇಶ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಜರುಗಲಿದೆ. ಅಲ್ಲದೆ ತಾಳಿಕೋಟೆಯ ಮಹಾಲಕ್ಷ್ಮೀ ಭಜನಾ ಮಂಡಳಿ, ಗಾಯತ್ರಿ ಭಜನಾ ಮಂಡಳಿಯಿಂದ ನಾಮ ಸಂಕೀರ್ತನೆ, ಮಹಾ ಮಂಗಳಾರತಿ ಜರುಗಲಿದೆ.

    ಏ.1 ರಂದು ಉತ್ತರಾರಾಧನೆ ನಿಮಿತ್ತ ಸುಪ್ರಭಾತ, ವೇದಘೋಷ, ವೃಂದಾವನಗಳಿಗೆ ಅಭಿಷೇಕ ಅಲಂಕಾರ, ತೀರ್ಥ ಪ್ರಸಾದ ಜರುಗಲಿದೆ ಎಂದು ಶ್ರೀ ಅಕ್ಷೋಭ್ಯತೀರ್ಥರು ಹಾಗೂ ವಿದ್ಯಾನಿಧಿ ತೀರ್ಥರ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts