More

    ಮಹಿಳೆ ಸನಾತನ ಸಂಸ್ಕೃತಿ ಅಳವಡಿಸಿಕೊಳ್ಳಲಿ

    ತಾಳಿಕೋಟೆ: ಸನಾತನ ಧರ್ಮದೊಂದಿಗೆ ಮುನ್ನಡೆಯುತ್ತಾ ಸಾಗಿದ ಭಾರತೀಯ ಸಂಸ್ಕೃತಿಯು ಮಹಿಳೆಗೆ ದೇವತೆಯ ಸ್ಥಾನಮಾನ ನೀಡಿ ಗೌರವಿಸಿದೆ ಎಂದು ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಹೇಳಿದರು.

    ಸ್ಥಳೀಯ ಶ್ರೀದೇವಿ ಮಾತೃ ಮಂಡಳಿ, ಹಿಂದು ಮಹಾಗಣಪತಿ ಮಹಾಮಂಡಳಿಯವರ ವತಿಯಿಂದ ಗುರುವಾರ ವಿಠ್ಠಲ ಮಂದಿರದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಪುರುಷರಿಗಿಂತ ಮಹಿಳೆಯರು ಎಲ್ಲ ರಂಗದಲ್ಲಿಯೂ ಮೇಲುಗೈ ಸಾಧಿಸುತ್ತಿದ್ದಾರೆ. ಇದು ಮೆಚ್ಚುಗೆಯ ಸಂಗತಿ. ಆದರೆ ವಿದೇಶಿ ಸಂಸ್ಕೃತಿಯತ್ತ ವಾಲದೇ ನಮ್ಮ ಸಂಸ್ಕೃತಿ, ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದರು.

    ಜಿಲ್ಲಾ ಪಾಲಕರ ಸಂಘದ ಉಪಾಧ್ಯಕ್ಷೆ ಶಿಲ್ಪಾ ಕುದರಗುಂಡ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳೆಯರ ಸಾಧನೆಗಳನ್ನು ಗುರುತಿಸಲು ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಲಿಂಗ ಸಮಾನತೆ ಪ್ರತಿಪಾದಿಸಲು ಪ್ರತಿವರ್ಷ ಮಾ. 8ರಂದು ಆಚರಿಸಲಾಗುತ್ತದೆ. ಮಹಿಳೆ ಅಬಲೆಯಲ್ಲ, ಸಬಲೆಯಾಗಿದ್ದಾಳೆ. ಇಂದಿನ ದಿನಗಳಲ್ಲಿ ಎಲ್ಲ ರಂಗದಲ್ಲಿಯೂ ಮುನ್ನುಗಿರುವುದು ಸಾಧನೆಯಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ ಮತ್ತು ಹಕ್ಕುಗಳ ಕುರಿತು ಹೆಚ್ಚು ಮಹತ್ವ ಹೊಂದಿದೆ. ಮಹಿಳೆಯರ ಸಾಧನೆಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದರು.

    ವಿರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷ ಶಿವಶಂಕರ ಹಿರೇಮಠ ಮಾತನಾಡಿದರು. ಶ್ರೀದೇವಿ ಮಾತೃ ಮಂಡಳಿಯ ಉಸ್ತುವಾರಿ ಶಿವಮ್ಮ ಬಿರಾದಾರ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆದರ್ಶ ಮಹಿಳೆಯರನ್ನು, ವಿವಿಧ ಮಹಿಳಾ ಮಂಡಳದ ಪದಾಧಿಕಾರಿಗಳು ಹಾಗೂ ಸದಸ್ಯೆಯರನ್ನು, ಪುರಸಭೆಯ ಪೌರ ಕಾರ್ಮಿಕರನ್ನು ಸನ್ಮಾನಿಸಿದರು. ಭರತ ನಾಟ್ಯ ಪ್ರದರ್ಶಿಸಿದ ವಿದ್ಯಾರ್ಥಿನಿಯರಿಗೆ ನೋಟಬುಕ್, ಲಂಚ್ ಬಾಕ್ಸ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts