ಸ್ಯಾಂಟ್ರೋ ರವಿಯನ್ನ ಅರೆಸ್ಟ್​ ಮಾಡಿದ ಬಳಿಕ ಬೆಂಗಳೂರಿಗೆ ತೆರಳುವೆ, ಅಲ್ಲಿವರೆಗೂ ಮೈಸೂರಲ್ಲೇ ಇರುವೆ: ಎಡಿಜಿಪಿ ಅಲೋಕ್ ಕುಮಾರ್

santro ravi
Published on

ಮೈಸೂರು: ಸ್ಯಾಂಟ್ರೋ ರವಿ ಅಲಿಯಾಸ್​ ಮಂಜುನಾಥ್​ನ ಬಂಧನ ಆಗಿಲ್ಲ. ಪೊಲೀಸ್ ಇಲಾಖೆಯವರ ಜತೆಗೂ ಆತನ ನಂಟು ಇದ್ದು, ಆ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದ ಎಡಿಜಿಪಿ ಅಲೋಕ್ ಕುಮಾರ್, ಸ್ಯಾಂಟ್ರೋ ರವಿಯನ್ನು ಬಂಧಿಸಿದ ನಂತರವೇ ನಾನು ಬೆಂಗಳೂರಿಗೆ ತೆರಳುವೆ. ಅಲ್ಲಿಯವರೆಗೂ ನಾನು ಮೈಸೂರಿನಲ್ಲೇ ಇರುವೆ ಎಂದರು.

ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಅಲೋಕ್ ಕುಮಾರ್, ಶೀಘ್ರದಲ್ಲೇ ಸ್ಯಾಂಟ್ರೋ ರವಿ ಬಂಧನದ ಸಿಹಿ ಸುದ್ದಿ ಕೊಡುತ್ತೇವೆ. ಸ್ವಲ್ಪ ತಾಳ್ಮೆಯಿಂದ ಇರಿ. ಅವನು ಅಂಡಮಾನ್​ನಲ್ಲಿ ಇರಲಿ, ಬೇರೆ ಎಲ್ಲೇ ಇರಲಿ. ಅವನನ್ನು ಹಿಡಿದು ತರುತ್ತೇವೆ‌. ದೇಶದ 7 ರಾಜ್ಯಗಳಲ್ಲಿ ನಮ್ಮ ಟೀಂ ಪತ್ತೆ ಕಾರ್ಯಕ್ಕೆ ಹೋಗಿದೆ. ಅವನು ಎಲ್ಲೇ ಅಡಗಿದ್ದರೂ ಶೀಘ್ರವೇ ಬಂಧಿಸುತ್ತೇವೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜ.19ರಂದು ಬೆಂಗಳೂರು ಬರುತ್ತಾರೆ. ಅಲ್ಲಿಯವರೆಗೂ ನಾನು ಇಲ್ಲೇ ಇರುತ್ತೇನೆ. ಅಷ್ಟರೊಳಗೆ ಸ್ಯಾಂಟ್ರೋ ರವಿಯನ್ನು ಬಂಧಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net