ವಿಷ್ಣುವರ್ಧನ್​​ಗೆ 'ಕರ್ನಾಟಕರತ್ನ' ಪ್ರಶಸ್ತಿ ಕೊಡಿ; CM ಸಿದ್ದರಾಮಯ್ಯಗೆ ಹಿರಿಯ ನಟಿಯರು ಮನವಿ

photo-2025-09-02t195542378-68b6fe6ed2ed0
Published on

ದಿವಂಗತ ನಟ ವಿಷ್ಣುವರ್ಧನ್​​ಗೆ ಮರಣೋತ್ತರವಾಗಿ 'ಕರ್ನಾಟಕರತ್ನ' ಪ್ರಶಸ್ತಿ ನೀಡುವಂತೆ ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಮಂಗಳವಾರ (ಸೆ.2) ಮುಖ್ಯಮಂತ್ರಿ(CM) ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, '' ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಅವರು ಇಂದು ನನ್ನ ಭೇಟಿಯಾಗಿ ವಿಷ್ಣುವರ್ಧನ್​ ಅವರಿಗೆ 'ಕರ್ನಾಟಕರತ್ನ' ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ'' ಎಂದಿದ್ದಾರೆ.

ಅಲ್ಲದೆ, ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ.ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರದ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು ಎಂದು ಪೋಸ್ಟ್​​ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net