ಸಿಯೋಲ್: ದಕ್ಷಿಣ ಕೊರಿಯಾದ ನಟಿಯೊಬ್ಬರು ತಮ್ಮ ಮಾಜಿ ಪತಿಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಟಿವಿ ಕಾರ್ಯಕ್ರಮಗಳ ಸಾಮಾನ್ಯ ಮತ್ತು ಡಬ್ಬಿಂಗ್ ಕಲಾವಿದೆಯಾಗಿರುವ ಸಿಯೋ ಯು ರಿ ಇತ್ತೀಚೆಗೆ ತನ್ನ ಮಾಜಿ ಪತಿ ಮತ್ತು ನಿರ್ಮಾಪಕ ಚೋಯ್ ಬೈಯುಂಗ್ ಗಿಲ್ ಬಗ್ಗೆ ಮುಕ್ತವಾಗಿ ಮಾತನಾಡಿದರು.
39 ವರ್ಷದ ಸಿಯೋ, ತಾನು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದರು. ಒಮ್ಮೆ ವೈದ್ಯರನ್ನು ಸಂಪರ್ಕಿಸಿದಾಗ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಆದರೆ, ಶಸ್ತ್ರಚಿಕಿತ್ಸೆಯ ನಂತರ ಮಕ್ಕಳಾಗುವುದಿಲ್ಲ ಎಂದು ವೈದ್ಯರು ಹೇಳಿದರು. ಇದಾದ ನಂತರ ನಟಿ ಸಿಯೋ, ಶಸ್ತ್ರಚಿಕಿತ್ಸೆಗೆ ಮುನ್ನ ತನಗೆ ಮಗು ಬೇಕು ಎಂದು ಬಯಸಿದರು. ಈ ಸಂಗತಿಯನ್ನು ತನ್ನ ಪತಿಗೆ ತಿಳಿಸಿದಾಗ, ಆತ ಅಲ್ಲಿಂದ ಹೊರಟು ಹೋದನು ಎಂದು ಸಿಯೊ ಹೇಳಿದ್ದಾರೆ.
ಅಲ್ಲದೆ, ನಿನಗೆ ಮಗು ಬೇಕಾದರೆ ಬೇರೊಬ್ಬ ಪುರುಷನ ಬಳಿ ಕೇಳು ಎಂದು ಚೋಯ್ ಬೈಯುಂಗ್ ಗಿಲ್ ಏರು ಧ್ವನಿಯಲ್ಲಿ ಮಾತನಾಡಿದರು. ಆ ಸಮಯದಲ್ಲಿ ನನಗೆ ಮೋಸ ಹೋಗಿದ್ದೇನೆ ಎಂಬ ಭಾವನೆ ವ್ಯಕ್ತವಾಯಿತು. ಅಲ್ಲದೆ, ತುಂಬಾ ಕೋಪ ಸಹ ಬಂತು. ಆದರೆ, ಆತನಿಗೆ ಪ್ರತ್ಯುತ್ತರ ನೀಡಲು ಆಗಲಿಲ್ಲ ಎಂದು ಸಿಯೋ ಹೇಳಿದ್ದಾರೆ.
ಇತ್ತೀಚೆಗಷ್ಟೇ ಇಬ್ಬರು ವಿಚ್ಛೇದನ ಪಡೆದಿದ್ದಾರೆ. ಇದಕ್ಕೆ ಕಾರಣವನ್ನು ತಿಳಿಸುವಾಗ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವರದಿಯ ಪ್ರಕಾರ, ನಟಿ ಸಿಯೋ ಕೊರಿಯನ್ ಚಾನೆಲ್ ಒಂದರ ಶೋನಲ್ಲಿ ಈ ವಿಷಯಗಳನ್ನು ಹೇಳಿದ್ದಾರೆ. ಆದರೆ, ನಟಿಯ ಮಾಜಿ ಪತಿ ಚೋಯ್, ಆರೋಪವನ್ನು ನಿರಾಕರಿಸಿದ್ದಾರೆ. ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ತನಗೆ ಇಂತಹ ಮಾತು ಹೇಳಿದ್ದು ನೆನಪಿಲ್ಲ ಎಂದಿದ್ದಾರೆ ಎಂದು ಕೊರಿಯನ್ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)
ಈತ ಟೀಮ್ ಇಂಡಿಯಾದ ಅತ್ಯಂತ ದುರಾದೃಷ್ಟಕರ ಆಟಗಾರ! ಸ್ಟಾರ್ ಪಟ್ಟ ಪಡೆದ್ರೂ ಕೈಹಿಡಿಯದ ಅದೃಷ್ಟ
ಟೀಮ್ ಇಂಡಿಯಾದ ಈ ಆಟಗಾರನಿಗೆ ದೇಶಭಕ್ತಿಯೇ ಇಲ್ಲ! ವಿಶ್ವಕಪ್ ಗೆದ್ದ ಬೆನ್ನಲ್ಲೇ ಶ್ರೀಶಾಂತ್ ಆಕ್ರೋಶ
ಆ ಸ್ಟಾರ್ ನಟನೊಂದಿಗೆ ನಟಿಸಬೇಕೆಂಬುದೇ ನನ್ನ ಕನಸು! ರಾಶಿ ಖನ್ನಾ ಮಾತು ಕೇಳಿ ಫ್ಯಾನ್ಸ್ ಖುಷ್