More

    ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್​

    ಮುಂಬೈ: ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಇದೀಗ ನಾಗಿಣಿಯ ಅವತಾರದಲ್ಲಿ ಎದುರಾಗಲು ಸಜ್ಜಾಗುತ್ತಿದ್ದಾರೆ. ಅಂದರೆ, ಈಗಾಗಲೇ ಬಾಲಿವುಡ್​ನಲ್ಲಿ ಮೂಡಿಬಂದ ನಾಗಿಣಿ ಚಿತ್ರಗಳನ್ನೇ ಹೋಲುವ ರೀತಿಯ ಮತ್ತೊಂದು ಸಿನಿಮಾ ತಯಾರಿ ಹಂತದಲ್ಲಿದೆ. ಆ ಚಿತ್ರದಲ್ಲೀಗ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ದೊಡ್ಮನೆ ಹುಡುಗನ ದೊಡ್ಮನ್ಸು; ಗಂಗಾವತಿಯ ಸರ್ಕಾರಿ ಶಾಲೆಗೆ ನೆರವು

    ನಿಖಿಲ್​ ದ್ವಿವೇದಿ ಈ ನಾಗಿಣಿಯ ಹೊಸ ಅವತಾರವನ್ನು ತೆರೆಮೇಲೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಒಟ್ಟು ಮೂರು ಭಾಗಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆಯಂತೆ. ಈ ಹಿಂದೆ ಶ್ರೀದೇವಿ, ರೇಖಾ, ರೀನಾ ರಾಯ್​ ನಾಗಿಣಿಯಾಗಿ ಮಿಂಚಿದ್ದರು. ಈಗ ಅದೇ ಪೋಷಾಕನ್ನು ಶ್ರದ್ಧಾ ತೊಡಲಿದ್ದಾರೆ.

    ಇದನ್ನೂ ಓದಿ: ಮತ್ತೊಮ್ಮೆ ರಾಣಿಯಾಗಿ ಸುಮಲತಾ

    ಮರಾಠಿಯ ಲಾಪ್​ಚಪ್ಪಿ ಸಿನಿಮಾ ನಿರ್ದೇಶನ ಮಾಡಿದ್ದ ವಿಶಾಲ್​ ಫುರಿಯಾ ನಾಗಿಣಿ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಇನ್ನೇನು ಶೀಘ್ರದಲ್ಲಿ ಸಿನಿಮಾ ಸೆಟ್ಟೇರಲಿದೆ. ಚಿತ್ರದಲ್ಲಿನ ಬಹುಪಾಲು ಗ್ರಾಫಿಕ್ಸ್ ತಂತ್ರಗಾರಿಕೆ ಇರಲಿದ್ದು, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಸಿನಿಮಾ ತೆರೆಮೇಲೆ ಬರಲಿದೆಯಂತೆ. (ಏಜೆನ್ಸೀಸ್​)

    ರಚಿತಾ ರಾಮ್​ ಹೊಸ ಚಿತ್ರದ ಹೆಸರು ‘ಪಂಕಜ ಕಸ್ತೂರಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts