ರಚಿತಾ ರಾಮ್​ ಹೊಸ ಚಿತ್ರದ ಹೆಸರು 'ಪಂಕಜ ಕಸ್ತೂರಿ'

www
Published on

ಬೆಂಗಳೂರು: ಲಾಕ್​ಡೌನ್ ಸಡಿಲವಾಗುತ್ತಿದ್ದಂತೆ ಹಲವು ಸಿನಿಮಾಗಳ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಎರಡ್ಮೂರು ಸಿನಿಮಾಗಳನ್ನು ಮುಗಿಸಿಕೊಟ್ಟಿದ್ದಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ನಿರ್ದೇಶಕ ಮಯೂರ ರಾಘವೇಂದ್ರ ಜತೆಗೂ ಒಂದು ಸಿನಿಮಾ ಮಾಡುವುದಾಗಿ ರಚಿತಾ ಹೇಳಿದ್ದರು. ಇದೀಗ ಆ ಚಿತ್ರದ ಶೀರ್ಷಿಕೆ ಫಿಕ್ಸ್ ಆಗಿದ್ದು, ಪಂಕಜ ಕಸ್ತೂರಿ ಎಂದು ಟೈಟಲ್​ ಇಡಲಾಗಿದೆ.

ಈಗಾಗಲೇ ‘ಕನ್ನಡ್ ಗೊತ್ತಿಲ್ಲ’ ಚಿತ್ರವನ್ನು ನಿರ್ದೇಶಿಸಿರುವ ಮಯೂರ ರಾಘವೇಂದ್ರ, ಇದೀಗ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರದ ತಯಾರಿ ನಡೆಸಿದ್ದಾರೆ. ಅಂದಹಾಗೆ, 2018ರಲ್ಲಿ ಕಾಲಿವುಡ್​ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಕೊಲಮಾವು ಕೋಕಿಲ’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಮೂಲ ಚಿತ್ರದಲ್ಲಿ ನಯನತಾರಾ ಮಾಡಿದ ಪಾತ್ರವನ್ನು ಮಾಡುವುದಕ್ಕೆ ರಚಿತಾ ರಾಮ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸದ್ಯ ಶೀರ್ಷಿಕೆ ರಿವೀಲ್​ ಮಾಡಿಕೊಂಡಿರುವ ತಂಡ, ಶೀಘ್ರದಲ್ಲಿ ಶೀರ್ಷಿಕೆ ಪೋಸ್ಟರ್ ಲಾಂಚ್​ ಮಾಡಲಿದೆ. ಅದಾದ ಬಳಿಕ ಚಿತ್ರೀಕರಣಕ್ಕೂ ಈಗಾಗಲೇ ಪ್ಲಾನ್​ ಸಿದ್ಧವಾಗಿದ್ದು, ನವೆಂಬರ್​ನಲ್ಲಿ ಶೂಟಿಂಗ್​ ಶುರುವಾಗಲಿದೆಯಂತೆ. ಕಮರ್ಷಿಯಲ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರಚಿತಾ ಸದ್ಯ ನಾಯಕಿ ಪ್ರಧಾನ ಸಿನಿಮಾಗಳತ್ತ ಚಿತ್ತ ಹರಿಸಿದ್ದಾರೆ. ಅವರ ಸಿನಿಮಾ ಬತ್ತಳಿಕೆಯಲ್ಲಿ ಈಗಾಗಲೇ ‘ಲಿಲ್ಲಿ’, ‘ಏಪ್ರಿಲ್’ ಸಿನಿಮಾಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net