ಬೆಂಗಳೂರು: ( Shaambhawi Venkatesh) KGF ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಶಾಂಭವಿ ವೆಂಕಟೇಶ್. ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಗಂಡ ಹಾಗೂ ಇಬ್ಬರು ಅವಳಿ ಮಕ್ಕಳ ಜೊತೆಗೆ ಮುದ್ದಾದ ಸಂಸಾರ ಸಾಗಿಸುತ್ತಿದ್ದ ಶಾಂಭವಿ ಅವರ ಜೀವನದಲ್ಲಿ ಭಾರಿ ದೊಡ್ಡ ಆಘಾತ ಎದುರಾಗಿದೆ.
ನಟಿ ಶಾಂಭವಿ ಅವರಿಗೆ ದುರ್ಗಾ ಮತ್ತು ದುಷ್ಯಂತ್ ಎನ್ನುವ ಎರಡು ಪುಟ್ಟ ಕಂದಮ್ಮಗಳಿವೆ. ಇದೀಗ ಮಗ ದುಷ್ಯಂತ್ ಗೆ ಮಾರಣಾಂತಿಕ ಕಾಯಿಲೆ ಬಂದಿರುವ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಗನ ಕುರಿತಾಗಿ ಭಾವುಕರಾದ ನಟಿ ಶಾಂಭವಿ : ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ “3rd stage ಬ್ಲಡ್ ಕ್ಯಾನ್ಸರ್” ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ “ಇದು ಕ್ಯಾನ್ಸರ್ ಆಗಿರದೆ ಇರಲಿ” ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% curable ಅಂತಾ doctors ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. “ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ” ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ.
Chemotherapyಯ ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ therapy ಯ ಮೊದಲ ದಿನದಂದು ಕ್ಲಿಕ್ಕಿಸಿದ shots ಇದು ಎಂದು ಬರೆದು ಮಗನ ಜತೆ ಇರುವ ಕೆಲವು ಫೋಟೋಗಳು ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ.
ಪುಟ್ಟ ಕಂದನಿಗೆ ಬ್ಲಡ್ ಕ್ಯಾನ್ಸರ್ ಬಂದಿರೋದು ನೋಡಿ ಅಭಿಮಾನಿಗಳು ಸಹ ಭಾವುಕರಾಗಿದ್ದು, ಆದಷ್ಟು ಬೇಗ ಪುಟ್ಟ ಕಂದಮ್ಮ ಆರೋಗ್ಯವಾಗಿ ಬರಲಿ ಎಂದು ಹಾರೈಸಿದ್ದಾರೆ.
ನಿಗೂಢರಾತ್ರಿ ಧಾರಾವಾಹಿಯಲ್ಲಿ ಮಂದಾಕಿನಿಯಾಗಿ ನಟಿಸಿದ್ದ ಶಾಂಭವಿ ಅವರು ಬಳಿಕ ಪಾರು, ಲಕ್ಷ್ಮಿ, ಗೀತಾಂಜಲಿ ಸೀರಿಯಲ್ ನಲ್ಲಿ ಮಿಂಚಿದ್ದಾರೆ. ನೆಗೆಟಿವ್ ಶೇಡ್ ರೋಲ್ ನಲ್ಲಿ ಕಾಣಿಸಿಕೊಂಡರು. ತಮ್ಮ ಸೌಂದರ್ಯದ ಮೂಲಕ ಹೆಚ್ಚು ಸದ್ದು ಮಾಡಿದ್ದರು. ಪಾರು ಧಾರಾವಾಹಿಯಲ್ಲಿ ದಿಶಾ ಆಗಿ ಬದಲಾದ ಆಕೆ ವಿಲನ್ ಆಗಿಯೂ ಕಿರುತೆರೆಯಲ್ಲಿ ಅಬ್ಬರಿಸಿದ್ದರು. ಸ್ಯಾಂಡಲ್ ವುಡ್ನ ಬ್ಲಾಕ್ ಬಾಸ್ಟರ್ ಸಿನಿಮಾ ಕೆಜಿಎಫ್ ಚಾಪ್ಟರ್ 1ರಲ್ಲಿ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿಯೂ ನಾಯಕಿಯ ಗೆಳತಿಯಾಗಿ ಶಾಂಭವಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಎಕ್ಸ್ ಗರ್ಲ್ ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದರು.