ಸಮಂತಾ ಸಂಭಾವನೆ 3 ಕೋಟಿ ರೂಪಾಯಿ!; ಶಾಕುಂತಲಂ ಚಿತ್ರಕ್ಕೆ 150 ದಿನ ಶೂಟಿಂಗ್

Samantha
Published on

ಕಾಳಿದಾಸನ ‘ಅಭಿಜ್ಞಾನ ಶಾಕುಂತಲಂ’ ನಾಟಕವನ್ನು ಆಧರಿಸಿ, ಗುಣಶೇಖರ್ ಒಂದು ತೆಲುಗು ಚಿತ್ರ ಮಾಡುತ್ತಿದ್ದಾರೆ ಎಂಬ ವಿಷಯ ಓದಿರುತ್ತೀರಿ. ‘ಶಾಕುಂತಲಂ’ ಹೆಸರಿನ ಈ ಚಿತ್ರದಲ್ಲಿ ಸಮಂತಾ, ಶಾಕುಂತಲೆಯಾಗಿ ನಟಿಸುತ್ತಿರುವ ಸುದ್ದಿಯನ್ನೂ ಕೇಳಿರುತ್ತೀರಿ. ಸೋಮವಾರ ಈ ಚಿತ್ರವು ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋಸ್​ನಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ಎಲ್ಲ ಸರಿ, ಈ ಚಿತ್ರಕ್ಕೆ ಸಮಂತಾ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಮೂರು ಕೋಟಿ ಎಂದು ಹೇಳಲಾಗುತ್ತಿದೆ.

ಸಮಂತಾ ಈ ಚಿತ್ರಕ್ಕಾಗಿ 150 ದಿನಗಳ ಕಾಲ್​ಶೀಟ್ ನೀಡಿದ್ದು, ಅದಕ್ಕಾಗಿ ಮೂರು ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರಂತೆ. ಅಂದರೆ, ಪ್ರತಿದಿನ ಸಮಂತಾ ಪಡೆಯಲಿರುವ ಸಂಭಾವನೆ ಎರಡು ಲಕ್ಷವಾಗುತ್ತದೆ! ಬಾಲಿವುಡ್ ನಟಿಯರು ಒಂದು ಚಿತ್ರಕ್ಕೆ ಐದು, ಹತ್ತು ಕೋಟಿ ಸಂಭಾವನೆ ಪಡೆಯುವುದು ಹೊಸದಲ್ಲ. ಆದರೆ, ದಕ್ಷಿಣ ಭಾರತದಲ್ಲಿ ಒಬ್ಬ ನಟಿ ಮೂರು ಕೋಟಿ ಸಂಭಾವನೆ ಪಡೆಯುವುದು ದೊಡ್ಡ ವಿಷಯವೇ. ಆ ನಿಟ್ಟಿನಲ್ಲಿ ಸಮಂತಾ, ಬೇರೆ ನಟಿಯರಿಗೆ ಹೋಲಿಸಿದರೆ ಮುಂದಿದ್ದಾರೆ. ಈ ಚಿತ್ರದಲ್ಲಿ ದುಷ್ಯಂತ ಮಹಾರಾಜನಾಗಿ ಮಲಯಾಳಂ ನಟ ದೇವ್​ವೋಹನ್ ಕಾಣಿಸಿಕೊಳ್ಳುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net