More

    ಅಮ್ಮನನ್ನೂ ಮೀರಿಸುವ ಸುಂದರಿ KGF ನಟಿ ರವೀನಾ ಟಂಡನ್ ಪುತ್ರಿ

    ಬೆಂಗಳೂರು: ರವೀನಾ ಟಂಡನ್​ ಮಗಳು ರಾಶಾ ತಡಾನಿ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಈಕೆಯ ಕೆಲವು ಫೋಟೋಗಳು ವೈರಲ್​​ ಆಗುತ್ತಿದ್ದಂತೆ  ಅಮ್ಮನನ್ನೂ ಮೀರಿಸುವ ಸುಂದರಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

    ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಖ್ಯಾತ ನಟಿ ರವೀನಾ ಟಂಡನ್ ಕೆಜಿಎಫ್ ಸಿನಿಮಾದಿಂದ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ರವೀನಾ ಟಂಡನ್ ಖ್ಯಾತ ನಿರ್ಮಾಪಕ ರವಿ ಟಂಡನ್ ಅವರ ಮಗಳು. ನಟಿ ರವೀನಾ ಟಂಡನ್ ಅವರ ನಿಜವಾದ ವಯಸ್ಸು 49. ರವೀನಾ ಟಂಡನ್​ ಅವರಂತೆಯೇ ಮಗಳು ರಾಶಾ ತಡಾನಿ ಸಹ ಚೆಂದುಳ್ಳಿ ಚೆಲುವೆ.

    ಅಮ್ಮನನ್ನೂ ಮೀರಿಸುವ ಸುಂದರಿ KGF ನಟಿ ರವೀನಾ ಟಂಡನ್ ಪುತ್ರಿ

    ರಾಶಾ ತಡಾನಿ ತಮ್ಮ 19 ನೇ ಹುಟ್ಟುಹಬ್ಬದ ಸಂಭದಲ್ಲಿದ್ದಾರೆ. ರವೀನಾ ಟಂಡನ್‌ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳ ಬಾಲ್ಯದ ಫೋಟೋಗಳನ್ನು ಶೇರ್‌ ಮಾಡಿ, ವಿಶ್‌ ಮಾಡಿದ್ದಾರೆ. ರವೀನಾ ಅವರ ಈ ಸುಂದರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಶಾ, ‘ಲವ್ ಯೂ ಮಾಮ್…’ ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ.
    ರವೀನಾ ಟಂಡನ್​ ಅವರಂತೆಯೇ ಮಗಳು ರಾಶಾ ತಡಾನಿ ಸಹ ಚೆಂದುಳ್ಳಿ ಚೆಲುವೆಯಾಗಿದ್ದಾರೆ.

    ಅಮ್ಮನನ್ನೂ ಮೀರಿಸುವ ಸುಂದರಿ KGF ನಟಿ ರವೀನಾ ಟಂಡನ್ ಪುತ್ರಿ

    ರಾಶಾ ಥಡಾನಿ ಕೆಲವು ಬ್ರಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ . ರವೀನಾ ಟಂಡನ್ ಅವರ ಪುತ್ರಿಯಾಗಿರುವ ರಶಾ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅದಕ್ಕಿಂತ ಮುಂಚಿತವಾಗಿ, ಆಕೆ ಈಗಾಗಲೇ ಹಲವು ಜಾಹೀರಾತು ಫಲಕಗಳಲ್ಲಿ ಕಾಣಿಸಿಕೊಂಡಿದ್ದರೆ. ಮುಂಬೈನಾದ್ಯಂತ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ.

    ಅಮ್ಮನನ್ನೂ ಮೀರಿಸುವ ಸುಂದರಿ KGF ನಟಿ ರವೀನಾ ಟಂಡನ್ ಪುತ್ರಿ

    ರವೀನಾ ಟಂಡನ್ ತಮ್ಮ ಮಗಳ ಮುಖವನ್ನು ಮುಂಬೈನಾದ್ಯಂತ ಜಾಹೀರಾತು ಫಲಕಗಳಲ್ಲಿ ಗುರುತಿಸಿದ ನಂತರ ಉತ್ಸಾಹವನ್ನು ತಡೆಯಲು ಸಾಧ್ಯವಾಗಲಿಲ್ಲ ಮತ್ತು ಅದರ ವೀಡಿಯೊವನ್ನು ತಮ್ಮ Instagram ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಜಾಹೀರಾತು ಫಲಕಗಳಲ್ಲಿ ತಾಯಿ ಮತ್ತು ಮಗಳು ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ರಾಶಾ ಅವರು ರವೀನಾ ಅವರ ಜೆರಾಕ್ಸ್​ ನಂತೆ ಇದ್ದಾರೆ. ತಾಯಿ ಯಾರು? ಮತ್ತು ಮಗಳು ಯಾರು? ಎಂದು ಗೊಂದಲವಾಗುತ್ತಿದೆ. ಈಕೆ ಕೂಡಾ ರವಿನಾ ಅವರಂತೆ ದೊಡ್ಡ ಹೆಸರು ಮಾಡಲಿದ್ದಾರೆ ಎಂದು ರವಿನಾ ಟಂಡರ್​ ಅವರ ಫ್ಯಾನ್ಸ್​​ ರಾಶಾ ತಡಾನಿ ಅವರ ಸೌಂದರ್ಯವನ್ನು ಹಾಡಿ ಹೋಗಳುತ್ತಿದ್ದಾರೆ.

    ರಾಶಾ ತನ್ನ ಮೊದಲ ಚಿತ್ರವನ್ನು ಸೌತ್ ಸ್ಟಾರ್ ರಾಮ್ ಚರಣ್ ಅವರೊಂದಿಗೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಸಿಸಿಮಾವನ್ನು ಬುಚ್ಚಿ ಬಾಬು ನಿರ್ದೇಶಿಸಲಿದ್ದಾರೆ. ಆದರೆ, ಚಿತ್ರ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ರವೀನಾ ಟಂಡನ್​ ಪುತ್ರಿಯನ್ನು ಸ್ಕ್ರೀನ್​​ ಮೇಲೆ ನೋಡಲು ಫ್ಯಾನ್ಸ್​​ ಕಾಯುತ್ತಿದ್ದಾರೆ.

    ನಾನು ಅಧ್ಯಕ್ಷನಾಗಿ ಆಯ್ಕೆಯಾಗದಿದ್ದರೆ ರಕ್ತಪಾತವಾಗುತ್ತದೆ: ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts