`ಗಡಿಬಿಡಿ ಕೃಷ್ಣ' ಸಿನಿಮಾ ನಟಿ ಚಿತ್ರರಂಗದಿಂದ ದೂರ ಉಳಿಯಲು ಕಾರಣ ಬಿಚ್ಚಿಟ್ಟ ರಾವಳಿ ತಾಯಿ

actressravali
Published on

ಬೆಂಗಳೂರು: ನಟ ಶಿವರಾಜ್​ಕುಮಾರ್​ ಅವರಿಗೆ 'ಗಡಿಬಿಡಿ ಕೃಷ್ಣ' ಸಿನಿಮಾದಲ್ಲಿ ಜೋಡಿಯಾಗುವ ಮೂಲಕವಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ನಟಿ ರಾವಳಿ ಇದ್ದಕ್ಕಿದ್ದ ಹಾಗೆ ಯಾಕೆ ಸಿನಿಮಾರಂಗದಿಂದ ದೂರವಾಗಿದ್ದಾರೆ ಎನ್ನುವ ಸಂಗತಿಯನ್ನು ನಟಿಯ ತಾಯಿ ವಿಜಯದುರ್ಗ ಅವರು ಬಿಚ್ಚಿಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ತಾಯಿ ವಿಜಯದುರ್ಗ ಮಾತನಾಡಿ,  ರವಳಿ ತುಂಬಾ ದಪ್ಪಗಾಗಿದ್ದಾಳೆ, ಅದಕ್ಕೇ ಅವಕಾಶಗಳು ಕಡಿಮೆಯಾದವು ಎಂಬ ಬರಹವೊಂದರ ಪ್ರಭಾವದಿಂದ ರವಳಿ ಸಿನಿಮಾ ಅವಕಾಶಗಳು ನಿಂತು ಹೋಗಿದ್ದವು. ನಮ್ಮೆಲ್ಲರ ಸಲಹೆಯ ಮೇರೆಗೆ ರವಳಿ ಡಯಟ್ ಮಾಡಲು ಪ್ರಾರಂಭಿಸಿದರು ಅನೇಕ ಜನರು ರವಳಿ ನಟನೆಯನ್ನು ನೋಡಲು ಬಯಸುತ್ತಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅವಳನ್ನು ಕೇಳುತ್ತಾರೆ. ಅಪ್ರಚಾರದಿಂದಲೇ ರವಳಿಯವರ ವೃತ್ತಿಜೀವನ ನಾಶವಾಯಿತು ಎಂದಿದ್ದಾರೆ.

2024ರಲ್ಲಿ ಮತ್ತೆ ಹಳೇ ರಾವಳಿಯನ್ನು ತೆರೆ ಮೇಲೆ ನೋಡಲಿದ್ದಾರೆ ಎನ್ನಲಾಗುತ್ತಿದೆ. ಸೋ.. ರಾವಳಿಯನ್ನು ಮತ್ತೆ ತೆರೆ ಮೇಲೆ ನೋಡುವ ಕಾತರದಲ್ಲಿರುವ ಅಭಿಮಾನಿಗಳು 2024ರವರೆಗೆ ಕಾಯಲೇಬೇಕು.

ಆಂಧ್ರ ಮೂಲದ ರಾವಳಿ ಕನ್ನಡ,ತೆಲಗು,ತಮಿಳು,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.`ಗಡಿಬಿಡಿ ಕೃಷ್ಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾವಳಿ ನಂತರ `ಕುಬೇರ',`ಖಳನಾಯಕ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2007 ರಲ್ಲಿ ಮದುವೆಯ ನಂತರ ಚಿತ್ರರಂಗಕ್ಕೆ ವಿದಾಯ ಹೇಳಿದ ಇವರಿಗೆ ಈಗ ಒಂದು ಮುದ್ದಾದ ಹೆಣ್ಣು ಮಗು ಇದೆ. ಮತ್ತೇ ಸಿನಿಮಾರಂಗಕ್ಕೆ ಎಂಟ್ರಿ ಕೋಡ್ತಾರೆ ಎನ್ನುವ ಸುದ್ದಿ ಇದೆ. ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net