ಮುದ್ದು ಅಜ್ಜಿಯರಿಗಾಗಿ ಮುಂದಿನ ಬಾರಿ ಕನ್ನಡದಲ್ಲಿಯೇ ಮಾತನಾಡುತ್ತೇನೆ; ನಟಿ ರಮ್ಯಾ

ramya
Published on

ಬೆಂಗಳೂರು: ಸ್ಯಾಂಡಲ್​ವುಡ್​​​ ನಟಿ ರಮ್ಯಾ ಅವರು ತಮ್ಮದೆ ಆಗಿರುವ ವಿಭಿನ್ನವಾದ ನಟನಾ ಶೈಲಿ ಮೂಲಕವಾಗಿ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಆದರೆ ಇವರ ಭಾಷೆ ಕುರಿತಾಗಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತಾಗಿ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.

ಇತ್ತೀಚಿಗೆ ರಮ್ಯಾ ಅವರು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ರಮ್ಯಾ ಅವರು ಕಾರ್ಯಕ್ರಮ ಪ್ರಾರಂಭವಾಗಿದ್ದನಿಂದ ಮುಗಿಯುವವರೆಗೂ ಬಹುಪಾಲು ಇಂಗ್ಲಿಷ್ ಭಾಷೆಯಲ್ಲಿಯೇ ಮಾತನಾಡಿದ್ದರು. ಇದು ಕನ್ನಡದ ಶೋನ ಇಲ್ಲಾ ಇಂಗ್ಲಿಷ್ ಶೋನ ಅರ್ಥವಾಗುತ್ತಿಲ್ಲ. ರಮ್ಯಾ ಮಾತನಾಡಿದ್ದು ಅಜ್ಜ-ಅಜ್ಜಿಯಂದಿರಿಗೆ ಅರ್ಥವಾಗಿಲ್ಲ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದರು. ಈ ಕುರಿತಾಗಿ ರಮ್ಯಾ ಅವರು ಉತ್ತರ ನೀಡಿದ್ದಾರೆ.

ರಮ್ಯಾ ಹೇಳಿದ್ದೇನು?: "ಮುಂದಿನ ಬಾರಿ ಎಲ್ಲಾ ಮುದ್ದಿನ ಅಜ್ಜಿಯಂದಿರಿಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕಾರ್ಯಕ್ರಮದ ಅತಿಥಿಗಳು ಬಹುತೇಕರು ಕನ್ನಡಿಗರಾಗಿದ್ದರು. ಅವರಿಗೆ ಅರ್ಥವಾಗಲು, ಎಲ್ಲರನ್ನೂ ಒಳಗೊಳ್ಳಲು ಇಂಗ್ಲಿಷ್ ನಲ್ಲಿ ಮಾತನಾಡಿದೆ ಅಷ್ಟೇ ಎಂದಿದ್ದಾರೆ. ನಾವೆಲ್ಲರೂ ಪ್ರೀತಿ ಮತ್ತು ದಯೆಯಿಂದ ಭಾಷೆಯನ್ನು ಮಾತನಾಡೋಣ, ಹಂಚೋಣ" ಎಂದು ರಮ್ಯಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net