More

    ಡ್ರಗ್​ ಮಾಫಿಯಾ: ‘ಗಂಡಸರು ಪವಿತ್ರ ಹಸುಗಳು’ ಹೇಳಿಕೆಗೆ ನಟಿ ರಮ್ಯಾ ಪ್ರತಿಕ್ರಿಯೆ ಹೀಗಿದೆ…

    ಬೆಂಗಳೂರು: ಸೋಷಿಯಲ್​ ಮೀಡಿಯಾದಲ್ಲಿ ನಟಿ ರಮ್ಯಾ ಸಕ್ರಿಯರಾಗಿದ್ದಾರೆ. ಪ್ರಸ್ತುತ ಘಟಾನುವಳಿಗಳಿಗೆ ಟ್ವಿಟರ್​ನಲ್ಲಿ ಸ್ಪಂದಿಸುತ್ತಿದ್ದಾರೆ. ಅದರಲ್ಲೂ ಡ್ರಗ್​ ಮಾಫಿಯಾ ಶುರುವಾದಾಗಿನಿಂದ ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡುತ್ತಲಿದ್ದಾರೆ. ಇದೀಗ ಮತ್ತದೇ ಡ್ರಗ್​ ಮಾಫಿಯಾ ಬಗ್ಗೆ ರಮ್ಯಾ ಮಾತನಾಡಿದ್ದಾರೆ.

    ಇದನ್ನೂ ಓದಿ: FIRST LOOK| ಅತಿ ಚೆಂದದ ಹೂ ಗೊಂಚಲು, ಕಿಟಕಿಯಾಚೆ ಕಂಡ ಹಾಗಿದೆ…

    ಮುಂಬೈನ ಪತ್ರಕರ್ತೆಯೊಬ್ಬರು ಟ್ವಿಟರ್​ನಲ್ಲಿ ಸದ್ಯ ಬಾಲಿವುಡ್​ನಲ್ಲಿ ಭುಗಿಲೆದ್ದಿರುವ ಡ್ರಗ್​ ಮಾಫಿಯಾ ಬಗ್ಗೆ ಬರೆದುಕೊಂಡಿದ್ದರು. ಎನ್​ಸಿಬಿ ಅವರ ಕಣ್ಣಿಗೆ ಬಾಲಿವುಡ್​ನಲ್ಲಿನ ಮಹಿಳೆಯರಷ್ಟೇ ಕಾಣಿಸುತ್ತಿದ್ದಾರೆ. ಇನ್ನುಳಿದಂತೆ ನಿರ್ದೇಶಕರು ಮತ್ತು ನಟರು ಪವಿತ್ರ ಹಸುಗಳಾ? ಎಂದು ಪ್ರಶ್ನಿಸಿದ್ದರು.

    ಈ ಮೇಲಿನ ಹೇಳಿಕೆಯನ್ನು ರೀ ಟ್ವಿಟ್ ಮಾಡಿಕೊಂಡಿರುವ ರಮ್ಯಾ, ‘ಗಂಡಸು ಸೇದಿದರೆ ಅದು ಶಿವ ಶಂಭೋ, ಅದೇ ಕೆಲಸವನ್ನು ಹೆಣ್ಣು ಮಾಡಿದರೆ, ಧಮ್​ ಮಾರೋ ಧಮ್​…’ ಎಂದಿದ್ದಾರೆ. ಈ ಮೂಲಕ ಎನ್​ಸಿಬಿ ತಂಡದ ತನಿಖೆಯ ಹಾದಿಯನ್ನು ರಮ್ಯಾ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಒಂದೇ ಜಾಗ, ಎರಡೇ ಪಾತ್ರ, ಹೊಸ ಸಿನಿಮಾ …

    ಅದೇ ರೀತಿ ಸ್ಯಾಂಡಲ್ವುಡ್​ ನಟಿ ಪಾರೂಲ್​ ಯಾದವ್​ ಸಹ ಕೇವಲ ಹೆಣ್ಣುಮಕ್ಕಳನ್ನೇ ಏಕೆ ಟಾರ್ಗೇಟ್​ ಮಾಡಲಾಗುತ್ತಿದೆ. ಈ ಮಾಫಿಯಾದಲ್ಲಿ ಒಬ್ಬೇ ಒಬ್ಬ ಪುರುಷನೂ ಪಾಲ್ಗೊಂಡಿಲ್ಲವಾ? ಆ ವಿಚಾರವನ್ನೇಕೆ ತನಿಖಾ ತಂಡ ಬಯಲು ಮಾಡುತ್ತಿಲ್ಲ’ ಎಂದಿದ್ದಾರೆ.

    ಮತ್ತಿಬ್ಬರು ಸ್ಟಾರ್​ ನಟರಿಗೆ ಕಾದಿದೆ ಡ್ರಗ್ಸ್​ ಗಂಡಾಂತರ… ಹೊಸ ಬಾಂಬ್​ ಸಿಡಿಸಿದ ಸಂಬರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts