ಸಿನಿಮಾಗಳಿಗಿಂತ ಹೆಚ್ಚಾಗಿ ಈ ವಿಷಯದಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾದ್ರಾ ಸೌತ್ ಬ್ಯೂಟಿ ಪೂಜಾ ಹೆಗ್ಡೆ?

WhatsApp-Image-2024-04-18-at-12.58.20-PM
Published on

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಸೌತ್ ಬ್ಯೂಟಿ, ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ನೇಹಿತನೊಂದಿಗೆ ಕಾರಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರೀ ವದಂತಿಯೊಂದಕ್ಕೆ ಸಿಲುಕಿದರು. ಆ ವ್ಯಕ್ತಿಯೇ ನಟಿಯ ಬಾಯ್​​ಫ್ರೆಂಡ್ ಎಂಬುದು ಖಚಿತ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತು. ಸದ್ಯ ಈ ಬಗ್ಗೆ ನಟಿ ಮೌನ ಮುರಿದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

2022ರವರೆಗೆ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ತೆರೆಮೇಲೆ ಮಿಂಚಿದ ಪೂಜಾ ಹೆಗ್ಡೆ, ಪ್ರಸ್ತುತ ಯಾವುದೇ ತೆಲುಗು ಸಿನಿಮಾಗಳ ಪ್ರಾಜೆಕ್ಟ್​ಗಳನ್ನು ಹೊಂದಿಲ್ಲ. ಕಡೆಯದಾಗಿ ಎರಡು ವರ್ಷಗಳ ಹಿಂದೆ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೇ ನಟಿ ಇನ್ಯಾವ ಹೊಸ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ, ಇಂದಿಗೂ ಸಿನಿಪ್ರೇಕ್ಷಕರಿಗೆ ಪೂಜಾ ಮೇಲಿನ ನಿರೀಕ್ಷೆ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ.

ಈ ವರ್ಷ ತೆರೆಕಂಡ ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಸಿನಿಮಾದಲ್ಲಿ ಮಾತನಾಡಿದಂತೆ ಪೂಜಾ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಇತರೆ ಕಾರಣಗಳಿಂದ ನಟಿ ಚಿತ್ರತಂಡದಿಂದ ಹೊರನಡೆದರು. ಅದರ ಬೆನ್ನಲ್ಲೇ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿನ ಅವಕಾಶವನ್ನು ಸಹ ಕಳೆದುಕೊಂಡರು. ಹೀಗೆ ಅಂದು ಪೂಜಾಗೆ ಅವಕಾಶಗಳ ಕೊರತೆ ಕಾಡಿದ್ದು, ಬಹುಶಃ ಇಂದಿಗೂ ಮುಂದುವರೆದಿದೆ ಎಂಬಂತೆ ಕಾಣಿಸುತ್ತದೆ.

ವಾಸ್ತವವಾಗಿ ಪೂಜಾ ತಮ್ಮ ಸಿನಿ ವೃತ್ತಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಕಾರಣ ಇತ್ತೀಚೆಗೆ ತಮ್ಮ ಗೆಳೆಯ ರೋಹನ್ ಮೆಹ್ರಾ ಜತೆಯಲ್ಲಿ ಮುಂಬೈನ ರೆಸ್ಟೋರೆಂಟ್‌ಗೆ ತೆರಳಿದಾಗ ಕ್ಯಾಮರಾಮ್ಯಾನ್ ಕಣ್ಣಿಗೆ ಸಿಕ್ಕಿಬಿದದ್ದು. ರೋಹನ್ ಮೆಹ್ರಾ ಜತೆ ಪೂಜಾ ಹೆಗ್ಡೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಬಹುಶಃ ತಮ್ಮ ಕುಟುಂಬದೊಂದಿಗೆ ಮಾತನಾಡಿ, ಶೀಘ್ರವೇ ಹಸಮಣೆ ಏರಲು ಪೂಜಾ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಇದೆಲ್ಲವನ್ನು ಗಮನಿಸಿದರೆ ನಟಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಬ್ಯುಸಿಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ. ಪ್ರಸ್ತುತ ಬಾಲಿವುಡ್ ನಟ ಶಾಹಿದ್ ಕಪೂರ್ ಜತೆಗೆ ಹಿಂದಿ ಸಿನಿಮಾ ದೇವ ಚಿತ್ರೀಕರಣದ ಕೆಲಸಗಳಲ್ಲಿ ಪೂಜಾ ನಿರತರಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net