VIDEO| ಅಭಿಮಾನಿಯ ಕುಸುರಿ ಕೆಲಸಕ್ಕೆ ಮೇಘನಾ ಫಿದಾ; ಹೆಸರಲ್ಲಿಯೇ ಮೂಡಿತು ಚಿರು ಮುಖ!

collage (10)
Published on

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಇಲ್ಲವಾಗಿ 6 ತಿಂಗಳಾಯ್ತು. ಇಂದಿಗೂ ಒಂದಲ್ಲ ಒಂದು ಕಾರಣಕ್ಕೆ ಅಭಿಮಾನಿಗಳು ಅವರನ್ನು ನೆನೆಯುತ್ತಲೇ ಇರುತ್ತಾರೆ. ಇತ್ತೀಚೆಗೆ ಮೇಘನಾಗೆ ಗಂಡು ಮಗು ಹುಟ್ಟಿದ್ದೇ ತಡ, ಅಭಿಮಾನಿ ವಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಇದೀಗ ಇಲ್ಲೊಬ್ಬ ಅಭಿಮಾನಿ ತಮ್ಮ ಕಲೆಯಿಂದಲೇ ಚಿರಂಜೀವಿಯನ್ನು ನೆನಪು ಮಾಡಿಕೊಂಡಿದ್ದಾರೆ.

ವಿಶೇಷ ಏನೆಂದರೆ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಅಪ್ಪಟ ಅಭಿಮಾನಿಯಾಗಿರುವ ಚಾನ್ ಆರ್ಟ್ಸ್​ ಎಂಬುವವರು ಮೇಘನಾ ಹೆಸರನ್ನೇ ಬಳಸಿಕೊಂಡು, ಚಿರು ಸರ್ಜಾ ಅವರ ಚಿತ್ರಬಿಡಿಸಿದ್ದಾರೆ. ಸದ್ಯ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ವತಃ ಮೇಘನಾ ಸಹ ಆ ಚಿತ್ರ ನೋಡಿ ಫಿದಾ ಆಗಿದ್ದಾರೆ.

ಅಭಿಮಾನಿಯ ಈ ಕುಸುರಿ ಕೆಲಸವನ್ನು ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡು, ಅವರ ಅಭಿಮಾನಕ್ಕೆಹೃದಯದಿಂದ ಧನ್ಯವಾದ ಹೇಳಿದ್ದಾರೆ. ಸದ್ಯ ಜೂ. ಚಿರು ಆರೈಕೆಯಲ್ಲಿ ಸಮಯ ಕಳೆಯುತ್ತಿರುವ ಮೇಘನಾ, ಶೀಘ್ರದಲ್ಲಿಯೇ ಪುತ್ರನ ಹೆಸರನ್ನೂ ಬಹಿರಂಗಪಡಿಸಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net