More

    ದಾಂಪತ್ಯಕ್ಕೆ ಕಾಲಿಟ್ಟ ನಟಿ ಮಯೂರಿ: ನಡೆಯಿತು ಸರಳ ವಿವಾಹ

    ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಮಯೂರಿ ಕ್ಯಾತರಿ, ಇಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್, ಮಯೂರಿ ಅವರಿಗೆ ಬಹಳ ವರ್ಷಗಳ ಪರಿಚಯ. ಸುಮಾರು 10 ವರ್ಷಗಳ ಗೆಳೆತನದ ಬಳಿಕ ಅರುಣ್ ಮತ್ತು ಮಯೂರಿ ಮದುವೆಯಾಗಿದ್ದಾರೆ.

    ಇದೊಂದು ಲವ್ ಕಂ ಅರೇಂಜ್ಡ್ ಮದುವೆಯಾಗಿದ್ದು, ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ, ಕೆಲವೇ ಜನರ ಸಮ್ಮುಖದಲ್ಲಿ ನಡೆದಿದೆ. 

    ಕಳೆದ ತಿಂಗಳು ಮೇ 31ರಂದು ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋ ತೆಗೆಸಿಕೊಂಡು ಮಯೂರಿ ‘ಫೀಲಿಂಗ್ ಸ್ಪೆಷಲ್’ ಎಂಬ ಕ್ಯಾಪ್ಶನ್ ನೀಡಿ ಫೋಟೋ ಹಂಚಿಕೊಂಡಿದ್ದರು. ಆದರೆ ಮದುವೆಯ ಗುಟ್ಟು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಅಂತೂ ಎಲ್ಲರ ಅನುಮಾನವನ್ನು ಪರಿಸರಿಸಿದ್ದರೂ ಮದುವೆಯ ಡಿಟೇಲ್ಸ್​, ಹುಡುಗನ ಬಗ್ಗೆ ಹೇಳಿದೇ ಸೀಕ್ರೆಟ್​ ಮಾಡಿದ್ದ ನಟಿ, ಇಂದು ಮದುವೆಯಾಗುವ ಮೂಲಕ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

     

    ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts