More

    ನನ್ನನ್ನು ಮುಟ್ಟಬೇಡಿ ಎಂದು ನಟನೆ ಮೇಲೆ ರೇಗಿದ್ದ ನಟಿ; ಧಕ್‌ ಧಕ್‌ ಬೆಡಗಿ ಮೈ ನಡುಗಿತ್ತು, ಕೈ ಬೆವರಿತ್ತು…

    ಮುಂಬೈ: ಬಾಲಿವುಡ್​​ ನಟಿ ಮಾಧುರಿ ದೀಕ್ಷಿತ್​ ಅವರು ಟಾಪ್​ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸ್ಟಾರ್​ ಹೀರೋಗಳ ಜತೆ ನಟಿಸಿದ್ದ ಈಕೆ ಅಭಿನಯಿಸಿದ ಸಿನಿಮಾಗಳೆಲ್ಲವೂ ಸೂಪರ್​ ಹಿಟ್​​ ಆಗುತ್ತವೆ ಎನ್ನುವ ಕಾಲವೊಂದಿತ್ತು. ಈಕೆ ಶೂಟಿಂಗ್​ ವೇಳೆ ನಡೆದಿದ್ದ ಸಂದರ್ಭವೊಂದನ್ನು ರಿವೀಲ್​ ಮಾಡಿದ್ದಾರೆ.

    1989ರಲ್ಲಿ ಮಾಧುರಿ ದೀಕ್ಷಿತ್ ನಟನೆಯ ಪ್ರೇಮ್ ಪ್ರತಿಜ್ಞಾ ಚಿತ್ರಿಕರಣವೇಳೆ, ಸಿನಿಮಾದಲ್ಲಿ ಹೇಗೆ ಬಲವಂತವಾಗಿ ರೇಪ್ ದೃಶ್ಯವೊಂದಿತ್ತು. ರೇಪ್ ದೃಶ್ಯವನ್ನು ತಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಚಿತ್ರದ ನಿರ್ದೇಶಕರ ಬಳಿ ಹೇಳಿಕೊಂಡಿದ್ದೇನು. ಆದರೆ ಸಾಧ್ಯವೇ ಇಲ್ಲ ನೀವು ಮಾಡಲೇ ಬೇಕು ಎಂದಿದ್ದರು.

    80 ಹಾಗೂ 90ರ ದಶಕದಲ್ಲಿ ಮಾಧುರಿ ದೀಕ್ಷಿತ್ ಬಾಲಿವುಡ್‌ನ ಟಾಪ್‌ ಹೀರೋಯಿನ್ ಆಗಿದ್ದರು. ಅಂದಿನ ಎಲ್ಲಾ ಸೂಪರ್‌ಸ್ಟಾರ್‌ಗಳೂ ಈ ನಟಿಯ ಕಾಲ್‌ಶೀಟ್‌ಗಾಗಿ ಕಾದು ಕೂರುವಂತಹ ಸ್ಥಿತಿ ಇತ್ತು. ಇಂತಹ ನಟಿ 1989ರಲ್ಲಿ ತೆರೆಕಂಡಿದ್ದ ಸಿನಿಮಾದ ಒಂದು ಬೋಲ್ಡ್ ಸೀನ್‌ನಲ್ಲಿ ನಟಿಸುವುದಿಲ್ಲ ಅಂತ ಸೆಟ್ಟಿನಲ್ಲಿಯೇ ಕಣ್ಣೀರು ಹಾಕಿದ್ದರು.

    ಈ ಸೀನ್ ಮಾಡಲು ನನಗೆ ಇಷ್ಟನೇ ಇರಲಿಲ್ಲ ಮೈಯೆಲ್ಲಾ ನಡುಗುತ್ತಿತ್ತು. ಮೈಯಲ್ಲಾ ಬೆವರುತ್ತಿತ್ತು ಆದರೆ ಮಾಡದೆ ವಿಧಿಯಿರಲಿಲ್ಲ. ಈ ಸಿನಿಮಾದಲ್ಲಿ ಖಳನಾಯಕನಾಗಿ ರಂಜೀತ್‌ ಮಿಂಚಿದ್ದಲ್ಲದೆ ಸಾಕಷ್ಟು ಜನಪ್ರಿಯತೆ ಪಡೆದರು. ರಂಜೀತ್ ಈ ಸೀನ್ ಮಾಡುವಾಗ ನಡುಗಿಸಿಬಿಟ್ಟಿದ್ದರು. ಈ ಸೀನ್‌ ನಂತರವೂ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು ಪಾತ್ರದಿಂದ ಹೊರ ಬಂದಿರಲಿಲ್ಲ ಎಂದಿದ್ದಾರೆ.

    ಇದರಿಂದ ನಾನು ಕೋಪಗೊಂಡಿದ್ದೆ. ಎಲ್ಲರ ಮುಂದೆ ಜೋರಾಗಿ ಕೂಗಿದೆ. ನನ್ನನ್ನು ಮುಟ್ಟಬೇಡ ಎಂದು ಕಿರುಚಿದೆ. ಈ ಚಿತ್ರಕ್ಕೆ ಈ ಸೀನ್​ ತುಂಬಾ ಮುಖ್ಯವಾಗಿತ್ತು. ಸಿನಿಮಾ ಕೂಡಾ ಹಿಟ್​​ ಆಗಿತ್ತು. ಆದರೆ ಆ ದಿನಗಳನ್ನು ಮರೆಯುವಂತಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

    ಬಾಲಿವುಡ್‌ನ ‘ಧಕ್ ಧಕ್ ಗರ್ಲ್’ ಮಾಧುರಿ ದೀಕ್ಷಿತ್‌ ಬಗ್ಗೆ ಇಂದಿಗೂ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಇದೆ. ಮಾಧುರಿ ದೀಕ್ಷಿತ್ 80-90ರ ಕಾಲದಲ್ಲಿ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ತಮ್ಮ ನಟನೆಯ ಜೊತೆಗೆ ತಮ್ಮ ಮನೋಜ್ಞ ಶೈಲಿ ಮತ್ತು ನೃತ್ಯದಿಂದ ಪ್ರೇಕ್ಷಕರ ಹೃದಯದಲ್ಲಿ ಇಂದಿಗೂ ವಿಶೇಷ ಸ್ಥಾನವನ್ನು ಗಳಿಸಿದವರು. ಇಂದಿಗೂ ಬಾಲಿವುಡ್‌ನಲ್ಲಿ ಮಾಧುರಿ ದೀಕ್ಷಿತ್ ಅವರು ಚರ್ಚೆಯ ಸುದ್ದಿ.

    ನಾನು ಇವ್ರ ಮಾತು ಕೇಳಿ ತಪ್ಪು ಮಾಡಿ, ಇಂದು ಅನುಭವಿಸುತ್ತಿದ್ದೇನೆ: ಭಾವುಕಳಾದ ಪರಿಣಿತಿ

    ಐಶ್ವರ್ಯ ಫಸ್ಟ್​ನೈಟ್​​ ದಿನ ಮಂಚವೇ ಮುರಿದು ಹೋಗಿತ್ತು; ಮಧುಚಂದ್ರದ ಅಜ್ಞಾತ ಸ್ಟೋರಿ ರಿವೀಲ್…

    ಬಿಳಿ ಅಲ್ಲ, ನೀಲಿ ಅಕ್ಕಿ; ಓ ದೇವರೇ…ರೈಸ್​​ ಬಾತ್​ ಬಣ್ಣ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts