ಕೀರ್ತಿ ಸುರೇಶ್​ ಮೊದಲ ತೆಲುಗು ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

hyderabad-stills-of-film-aina-istam-nuvvu-302826
Published on

ಹೈದರಾಬಾದ್: ದಕ್ಷಿಣ ಭಾರತದಲ್ಲಿ ಬಹು ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿಯರ ಸಾಲಿನಲ್ಲಿ ನಟಿ ಕೀರ್ತಿ ಸುರೇಶ್​ ಮೊದಲಿಗರಾಗಿ ನಿಲ್ಲುತ್ತಾರೆ. ತೆಲುಗು, ತಮಿಳಿನ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಹೀಗಿರುವಾಗ ಇದೇ ನಟಿಯ ಮೊದಲ ತೆಲುಗು ಸಿನಿಮಾಕ್ಕೆ ಇದೀಗ ಬಿಡುಗಡೆಯ ಭಾಗ್ಯ ಸಿಕ್ಕಿದೆ!

ಅಚ್ಚರಿ ಅನಿಸಿದರೂ ಇದು ನಿಜ. 2016ರಲ್ಲಿ ತೆಲುಗಿನಲ್ಲಿ ಚೊಚ್ಚಲ ಸಿನಿಮಾಕ್ಕೆ ಕೀರ್ತಿ ಬಣ್ಣ ಹಚ್ಚಿದ್ದರು. ಆ ಚಿತ್ರದ ಹೆಸರು ಐನಾ ಇಷ್ಟಮ್ ನುವ್ವು. ನವೀನ್​ ವಿಜಯ್ ಕೃಷ್ಣ ನಾಯಕರಾಗಿ ನಟಿಸಿದ್ದರು. ಆದರೆ, ಸಿನಿಮಾ ಮಾತ್ರ ಬಿಡುಗಡೆ ಆಗದೇ ಕಾರಣಾಂತರಗಳಿಂದ ಮುಂದೂಡುತ್ತಲೇ ಬಂದಿತ್ತು. ಇದೀಗ ರಿಲೀಸ್​ಗೆ ರೆಡಿಯಾಗುತ್ತಿದೆ.

ಇದೀಗ ರೆಂಡು ಜೆಲ್ಲಾ ಸೀತಾ ಹೆಸರಿನಲ್ಲಿ ಶೀರ್ಷಿಕೆ ಬದಲಾಯಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕವನ್ನೂ ಘೋಷಿಸಿಕೊಳ್ಳಲಿದೆ. ಈ ಚಿತ್ರಕ್ಕೆ ಕಲಾ ನಿರ್ದೇಶಕರಾಗಿದ್ದ ಚಂತಿ ಅಡ್ಡಲ ಬಂಡವಾಳ ಹೂಡಿದ್ದು, ರಾಮ್​ ಪ್ರಸಾದ್​ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net