ಚೆನ್ನೈ: ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಸದ್ಯ ಬಾಲಿವುಡ್ಗೂ ಕೀರ್ತಿ ಸುರೇಶ್ ಕಾಲಿಟ್ಟಿದ್ದಾರೆ. ನಟ ವರುಣ್ ಧವನ್ ನಟನೆಯ ಬಾಬಿ ಜಾನ್ ಸಿನಿಮಾಗೆ ಕೀರ್ತಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಆಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಇದು ಇಳಯದಳಪತಿ ವಿಜಯ್ ನಟನೆಯ ಸೂಪರ್ ಹಿಟ್ ತಮಿಳು ಸಿನಿಮಾ ಥೇರಿ ರಿಮೇಕ್.
ತಾಜಾ ಸಂಗತಿ ಏನೆಂದರೆ, ಕೀರ್ತಿ ಸುರೇಶ್ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದಾರೆ. ಎಕ್ಸ್ (ಈ ಹಿಂದೆ ಟ್ವಿಟರ್) ಲೋಕದಲ್ಲಿ ಇಂದು ಕೀರ್ತಿ ಸುರೇಶ್ದ್ದೇ ಹವಾ. ಅದಕ್ಕೆ ಕಾರಣ ಅವರ ಗ್ಲಾಮರಸ್ ಲುಕ್. ಹಿಂದೆಂದೂ ಕಾಣದ ಗ್ಲಾಮರಸ್ ಲುಕ್ನಲ್ಲಿ ಕೀರ್ತಿ ಸುರೇಶ್ ಮಿಂಚಿದ್ದರಿಂದ ಇಂದು ಎಕ್ಸ್ನಲ್ಲಿ ಕೀರ್ತಿ ಟ್ರೆಂಡಿಂಗ್ನಲ್ಲಿದ್ದರು.
ಕೀರ್ತಿ ಸುರೇಶ್ ಅವರು 69ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ದಂತದ ಬಣ್ಣದ ಉಡುಗೆ ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಿನಿರಸಿಕರ ಮನಗೆದ್ದಿದ್ದಾರೆ. ಅಲ್ಲದೆ, ಎದೆಸೀಳು ಕಾಣುವಂತ ಡ್ರೆಸ್ ಧರಿಸಿ ಪಡ್ಡೆಹುಡುಗರ ಮೈಬಿಸಿಯೇರಿಸಿದ್ದಾರೆ. ಸದ್ಯ ಕೀರ್ತಿ ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಅವತಾರದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಕಣ್ ಕಣ್ ಬಿಡುತ್ತಿದ್ದಾರೆ.
ಇನ್ನೂ 69ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ದಸರಾ ಸಿನಿಮಾಗೆ ನಾನಿ ಮತ್ತು ಕೀರ್ತಿ ಸುರೇಶ್ ಉತ್ತಮ ನಟ ಮತ್ತು ನಟಿ ಪ್ರಶಸ್ತಿಗೆ ಭಾಜನರಾದರು. (ಏಜೆನ್ಸೀಸ್)
ಜೀವನದಲ್ಲಿ ಒಮ್ಮೆಯಾದ್ರೂ ಆ ಹೀರೋ ಜತೆ ನಟಿಸಬೇಕೆಂಬುದೇ ನನ್ನ ಆಸೆ: ಕೀರ್ತಿ ಸುರೇಶ್ ಅಚ್ಚರಿ ಹೇಳಿಕೆ