ಶಿವಮೊಗ್ಗದಲ್ಲಿ ನಟಿ ಜಾಕ್​ಲೀನ್​ ಫರ್ನಾಂಡೀಸ್​

Jack
Published on

ಬೆಂಗಳೂರು: ಬಾಲಿವುಡ್ ನಟಿ ಜಾಕ್​ಲೀನ್ ಫರ್ನಾಂಡೀಸ್, ‘ಕಿಚ್ಚ’ ಸುದೀಪ್ ಜತೆಗೆ ‘ಫ್ಯಾಂಟಮ್ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸುತ್ತಿರುವುದು ಗೊತ್ತಿರುವ ವಿಚಾರವೇ. ಇದೀಗ ಇದೇ ಜಾಕ್​ಲೀನ್ ಮಲೆನಾಡಿನ ಶಿವಮೊಗ್ಗದಲ್ಲಿ ಪ್ರತ್ಯಕ್ಷರಾಗಿದ್ದಾರೆ! ಗಾಲ್ಪ್ ಸ್ಟಿಕ್ ಹಿಡಿದು ಹಸಿರ ಪರಿಸರದ ನಡುವೆ ಒಂದಷ್ಟು ಸಮಯ ಕಳೆದಿದ್ದಾರೆ.

ಅಂದರೆ, ಶಿವಮೊಗ್ಗದ ಕಿಮ್ಮನೆ ಗಾಲ್ಪ್ ರೆಸಾರ್ಟ್​ಗೆ ಭೇಟಿ ನೀಡಿದ್ದಾರೆ. ಹಾಗಂತ ‘ಫ್ಯಾಂಟಮ್ ಸಿನಿಮಾದ ಚಿತ್ರೀಕರಣಕ್ಕೇನಾದರೂ ಬಂದರಾ? ಹಾಗೇನು ಇಲ್ಲ, ಸಿನಿಮಾ ಕೆಲಸಗಳಿಂದ ಒಂದಷ್ಟು ದಿನ ಬಿಡುವು ಪಡೆದು, ಸ್ನೇಹಿತರೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಸ್ನೇಹಿತರ ಜತೆಗಿನ ಗಾಲ್ಪ್ ಆಟದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ಬೆಸ್ಟ್ ವೀಕೆಂಡ್ ಎವರ್’ ಎಂದು ಬರೆದುಕೊಂಡಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಬಾಲಿವುಡ್​ನ ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿರುವ ಜಾಕ್​ಲೀನ್, ಕೆಲವೇ ತಿಂಗಳುಗಳಲ್ಲಿ ‘ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚನ ಜತೆ ಹೆಜ್ಜೆ ಹಾಕಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net