

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿವಾಗಿರುವುದಲ್ಲದೇ ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ನಟಿ ಎಂದರೆ ಅದು ಬಾಲಿವುಡ್ನ ದಿಯಾ ಮಿರ್ಜಾ. ದಿಯಾ ಮಿರ್ಜಾ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.
ಅವರು ಕಳೆದ ತಿಂಗಳು ಉದ್ಯಮಿ ವೈಭವ್ ರೆಖಿ ಅವರೊಂದಿಗೆ ಎರಡನೇ ವಿವಾಹವಾದರು. ಈ ಹೈದರಾಬಾದ್ ಮೂಲದ ಚೆಲುವೆ ದಿಯಾ ಮಿರ್ಜಾ ಈಗ ಹನಿಮೂನ್ ಮೂಡ್ನಲ್ಲಿದ್ದಾರೆ. ಅವರು ಹನಿಮೂನ್ಗಾಗಿ ಮಾಲ್ಡಿವ್ಸ್ಗೆ ತೆರಳಿದ್ದಾರೆ.
ಹೌದು ದಿಯಾ ಬರೀ ಹನಿಮೂನ್ ಗೆ ಹೋಗಿದ್ದರೆ ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ, ಅವರು ತಮ್ಮ ಮಲ ಮಗಳು ಸಮಿರಾಳನ್ನೂ ತಮ್ಮೊಟ್ಟಿಗೆ ಕರೆದುಕೊಂಡು ಹೋಗಿದ್ದಾರೆ. ವೈಭವ್ ರೇಖಿ ಅವರ ಮೊದಲ ಹೆಂಡತಿ ಸುನೈನಾ ಅವರಿಗೆ ಒಬ್ಬಳು ಮಗಳಿದ್ದಾಳೆ, ಅವಳೇ ಸಮಿರಾ. ಈ ಸಮಿರಾಳನ್ನು ಮಾಲ್ಡಿವ್ಸ್ಗೆ ದಿಯಾ ಮಿರ್ಜಾ ಕರೆದೋಯ್ದಿದ್ದಾರೆ. ವಿಶೇಷವೆಂದರೆ ಸುನೈನಾ, ಕಳೆದ ತಿಂಗಳು ನಡೆದಿದ್ದ ದಿಯಾ ಹಾಗೂ ರೇಖಿ ಮದುವೆಯಲ್ಲಿ ಪಾಲ್ಗೊಂಡು ಶುಭಾಶಯ ಹೇಳಿದ್ದರು.
ಹನಿಮೂನ್ನಲ್ಲಿರು ದಿಯಾ ಮಿರ್ಜಾ ವಿಭಿನ್ನ ಫೋಟೊಗಳನ್ನು ಹಂಚಿಕೊಂಡು ಇಂಟರ್ನೆಟ್ನಲ್ಲಿ ಗಮನ ಸೆಳೆದಿದ್ದಾರೆ. ಅದರಲ್ಲೂ ಮಗಳು ಸಮಿರಾಳೊಟ್ಟಿಗೆ ಇರುವ ಫೋಟೊ ವೈರಲ್ ಆಗಿದೆ. ನನಗೆ ಬಾಂಬೆನಲ್ಲಿ ಕುಟುಂಬ ಇಲ್ಲ, ಮಗಳು ಸಮಿರಾ ನಮ್ಮನ್ನು ಸೇರಿಕೊಂಡಿದ್ದರಿಂದ ಆ ಕೊರತೆ ನನಗೆ ಕಾಡುತ್ತಿಲ್ಲ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.