More

    ಮಹಿಳೆಯರ ‘ಬ್ಯಾಕ್’​ ಬಗ್ಗೆ ಕೀಳಾಗಿ ಮಾತನಾಡಿದ ತಮಿಳುನಾಡಿನ ಡಿಎಂಕೆ ಮುಖಂಡ!

    ಚೆನ್ನೈ: ಈಗಂತೂ ಪಂಚರಾಜ್ಯಗಳ ಚುನಾವಣೆ ಭರಾಟೆ ಜೋರಾಗಿ ನಡೆದಿದೆ. ಅದರಲ್ಲೂ ತಮಿಳುನಾಡಿನಲ್ಲಿ ಚುನಾವಣೆಯ ರಂಗು ಭಾರೀ ಜೋರಾಗಿದೆ. ಚುನಾವಣೆಯ ಭಾಷಣದಲ್ಲಿ ಕೆಲವು ಮುಖಂಡರು ಬಾಯಿಗೆ ಬಂದಂತೆ ಮಾತನಾಡಿ ಛೀ ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ. ಇಂತಹದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಇತ್ತೀಚೆಗೆ ಕೊಯಂಬತ್ತೂರಿನಲ್ಲಿ ಆಯೋಜಿಸಿದ್ದ ಚುನಾವಣಾ ರಾಲಿಯಲ್ಲಿ ಡಿಎಂಕೆ ಪಕ್ಷದ ನಾಯಕ ದಿಂಡಿಗಲ್ ಲಿಯೋನಿ ಎನ್ನುವರು, ಮಹಿಳೆಯರ ದೇಹ ಸೌಂದರ್ಯದ ಬಗ್ಗೆ ಕೀಳಾದ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ‘ವಿದೇಶಿ ಹಸುಗಳ ಹಾಲು ಕುಡಿಯುತ್ತಿರುವುದರಿಂದ ಇತ್ತೀಚೆಗೆ ಭಾರತದ ಮಹಿಳೆಯರ ಪೃಷ್ಟಗಳು ಬ್ಯಾರೆಲ್​ಗಳಂತೆ ಕಾಣುತ್ತಿವೆ. ಮುಂಚೆ ಭಾರತದ ಮಹಿಳೆಯರ ಪೃಷ್ಟಗಳು 8 ಅಂಕಿಯ ಆಕಾರದಲ್ಲಿರುತ್ತಿದ್ದವು. ಈಗ ವಿದೇಶಿ ಹಸುಗಳ ಹಾಲು ಬಳಸಿ ಬಳಸಿ, ಅವರ ಸೇಪ್ ಬದಲಾವಣೆ ಆಗಿದೆ. ಮುಂಚೆ ಅವರ ಕಂಕುಳಲ್ಲಿ ಮಕ್ಕಳು ಅರಾಮವಾಗಿ ಕುಳಿತುಕೊಳ್ಳುತ್ತಿದ್ದರು. ಈಗ ಮಕ್ಕಳು ಅವರ ಪೃಷ್ಠದ ಮೇಲೆ ಜಾರಿ ಜಾರಿ ಬೀಳುತ್ತಾರೆ’ ಎಂದು ಹೇಳಿದ್ದಾರೆ.

    ದಿಂಡಿಗಲ್ ಲಿಯೋನಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಡಿಎಂಕೆ ನಾಯಕಿ ಕನಿಮೋಳಿ ಅವರನ್ನು, ನಿಮ್ಮ ನಾಯಕನ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

    ಮಲಗಿದ್ದ ಹೆಂಡತಿಯ ಬೆರಳು ಕತ್ತರಿಸಿದ ಪತಿರಾಯ ! ಈ ಬಗ್ಗೆ ಸಿಎಂ ಹೇಳಿದ್ದೇನು ?

    ಜಾರಕಿಹೊಳಿ ಸಿಡಿ ಪ್ರಕರಣ ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts