ಫೋಟೋದಲ್ಲಿ ಕಿರುಚುತ್ತಿರುವ ಈ ನಾಟಿ ಪೋರಿ ಯಾರು...ಕ್ರಿಕೆಟಿಗನನ್ನು ವರಿಸಿದ್ದಾರೆ,  ನೀವು ಗೆಸ್ ಮಾಡ್ತೀರಾ?

athiya
Published on

ಮುಂಬೈ: ಬಾಲಿವುಡ್ ಸ್ಟಾರ್ ಗಳ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತವೆ. ಇತ್ತೀಚೆಗೆ ನಟಿಯೊಬ್ಬರು ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಇದು ಸದ್ಯಕ್ಕೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಫೋಟೋದಲ್ಲಿ ಕಾಣುತ್ತಿರುವ ಹುಡುಗಿಯನ್ನು ನೋಡಿದರೆ ಆಕೆ ಯಾರೆಂದು ಗುರುತಿಸುವುದು ಕಷ್ಟವೇ?, ಇರಲಿ..ಈ ನಟಿಯನ್ನು ಗುರುತಿಸಲು ನಾವು ನಿಮಗೆ ಸುಳಿವು ನೀಡುತ್ತೇವೆ. ಫೋಟೋದಲ್ಲಿ ಕಾಣುತ್ತಿರುವ ಈ ಹುಡುಗಿ ಬಾಲಿವುಡ್ ಸೂಪರ್‌ಸ್ಟಾರ್‌ ನ ಮಗಳು ಮತ್ತು ಕ್ರಿಕೆಟಿಗನ ಪತ್ನಿ. ಈ ನಟಿ ಯಾರು ಎಂದು ಈಗ ಗುರುತಿಸುತ್ತೀರಾ?, ಇಲ್ಲವಾದಲ್ಲಿ ಫೋಟೋದಲ್ಲಿ ಕಾಣುತ್ತಿರುವ ಈ ನಾಟಿ ಹುಡುಗಿ ಯಾರೆಂದು ನಾವೇ ಹೇಳುತ್ತೇವೆ.

ಫೋಟೋದಲ್ಲಿ ಕಾಣುತ್ತಿರುವ ಈ ಹುಡುಗಿ ಯಾರು?

ಫೋಟೋದಲ್ಲಿರುವ ಹುಡುಗಿ ಬೇರೆ ಯಾರೂ ಅಲ್ಲ, ಸುನೀಲ್ ಶೆಟ್ಟಿ ಅವರ ಪ್ರೀತಿಯ ಮಗಳು ಅಥಿಯಾ ಶೆಟ್ಟಿ. ಇತ್ತೀಚೆಗೆ, ಅಥಿಯಾ ತನ್ನ ಈ ಮುದ್ದಾದ ಬಾಲ್ಯದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಅವರು ಎರಡು ಜುಟ್ಟು ಕಟ್ಟಿಕೊಂಡು, ಫ್ರಾಕ್ ಧರಿಸಿ ಕೋಪದಿಂದ ಕೂಗುತ್ತಿದ್ದಾರೆ.   

ಈ ಫೋಟೋವನ್ನು ಹಂಚಿಕೊಳ್ಳುವಾಗ, ಅಥಿಯಾ ಶೆಟ್ಟಿ 'ಮುದ್ದು... ಆದರೆ ಸ್ಕಾರ್ಪಿಯೋ' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಅವರು 'ಮೂಡ್' ಎಂದು ಸಹ ಬರೆದಿದ್ದಾರೆ. ಬಹುಶಃ ಆಥಿಯಾ ಶೆಟ್ಟಿ ಈ ಫೋಟೋದ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ನಟಿಯ ಈ ಅಭಿವ್ಯಕ್ತಿ ಆಕೆಯ ಗರ್ಭಧಾರಣೆಯ ಸುದ್ದಿಗೆ ಸಂಬಂಧಿಸಿದೆ. ಇತ್ತೀಚೆಗೆ, ಆಕೆಯ ತಂದೆ ಸುನೀಲ್ ಶೆಟ್ಟಿ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ 'ತಾತ' ಆಗುವ ಬಗ್ಗೆ ಕಾಮೆಂಟ್ ಮಾಡಿದ್ದರು, ಅದರ ನಂತರ ಅಥಿಯಾ ತಾಯಿಯಾಗುತ್ತಿರುವ ಸುದ್ದಿ ಹಬ್ಬಿದೆ. ಸದ್ಯ ನಟಿಯ ಈ ಪೋಸ್ಟ್ ನಿಂದ ತಾನು ಗರ್ಭಿಣಿಯಲ್ಲ ಎಂಬುದು ಸ್ಪಷ್ಟವಾಗಿದೆ. 

ಅಥಿಯಾ ಶೆಟ್ಟಿ ಕೆಎಲ್ ರಾಹುಲ್ ಅವರನ್ನು ವಿವಾಹವಾಗಿದ್ದಾರೆ. ಮದುವೆ ಖಂಡಾಲಾ ಬಂಗಲೆಯಲ್ಲಿ ನಡೆಯಿತು. ಅಥಿಯಾ ಶೆಟ್ಟಿ 2015 ರಲ್ಲಿ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಅವರು 2017 ರಲ್ಲಿ 'ಮುಬಾರಕನ್' ಚಿತ್ರದಲ್ಲಿ ಕಾಣಿಸಿಕೊಂಡರು. ಅಥಿಯಾ ಕೊನೆಯದಾಗಿ 2019 ರಲ್ಲಿ 'ಮೋತಿಚೂರ್ ಚಕ್ನಾಚೂರ್' ನಲ್ಲಿ ಕಾಣಿಸಿಕೊಂಡರು. ಆದರೆ, ಈ ಚಿತ್ರದ ನಂತರ ಅಥಿಯಾ ಚಿತ್ರರಂಗದಿಂದ ದೂರವಾಗಿದ್ದಾರೆ. ಆದರೆ, ಅವರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಪ್ರತಿದಿನ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.   

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net