ಪ್ರಸಿದ್ಧ ನಟಿಯ ಸಹೋದರ ಕರೊನಾಗೆ ಬಲಿ! ಬೆಡ್​ಗಾಗಿ ಬೇಡಿಕೊಂಡಿದ್ದ ನಟಿ

ಪರಿ
Published on

ಲಖನೌ: ಕರೊನಾ ಎರಡನೇ ಅಲೆ ಹೆಚ್ಚು ಪರಿಣಾಮಕಾರಿಯಾಗಿ ಹರಡಲಾರಂಭಿಸಿದೆ. ಅನೇಕ ರಾಜಕಾರಣಿಗಳು ಹಾಗೂ ಸಿನಿಮಾ ಸ್ಟಾರ್​ಗಳ ಸಂಬಂಧಿಕರು ಹಾಗೂ ಸೆಲೆಬ್ರಿಟಿಗಳು ಕೂಡ ಸೋಂಕಿಗೆ ಬಲಿಯಾಗಲಾರಂಭಿಸಿದ್ದಾರೆ. ಇದೀಗ ಮತ್ತೊಬ್ಬ ನಟಿಯ ಸಹೋದರ ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ನಟಿ ಪಿಯಾ ಬಜ್ಪಿ ಅವರ ಸಹೋದರ ಕರೊನಾಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅವರು ಸಾವನ್ನಪ್ಪಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ಇಂದು ಬೆಳಗ್ಗೆ 6.45ರ ವೇಳೆಗೆ ಪಿಯಾ ಅವರು ಸಾಮಾಜಿ ಜಾಲತಾಣಗಳಲ್ಲಿ ತನ್ನ ಅಣ್ಣನಿಗೆ ಬೆಡ್​ ಬೇಕು, ಯಾರಾದರೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಸಹೋದರ ಸಾವನ್ನಪ್ಪಿರುವ ವಿಚಾರವನ್ನು ನಟಿ ಬೆಳಗ್ಗೆ 9.13ಕ್ಕೆ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ಪಿಯಾ ಅವರು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ವಾರದ ಹಿಂದಷ್ಟೇ ಕರೊನಾ ವಾರಿಯರ್ಸ್​ಗೆ ನಮನ ಸಲ್ಲಿಸುವ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net