More

    ಕನ್ನಡಕ್ಕೆ ಬಂದ ಆವಂತಿಕಾ; ಕ್ಯೂನಲ್ಲಿ ಭಾಗ್ಯಶ್ರೀ ಮಗಳು

    ಬೆಂಗಳೂರು: ‘ಮೈನೇ ಪ್ಯಾರ್ ಕಿಯಾ’ ಚಿತ್ರದ ಭಾಗ್ಯಶ್ರೀ, ಕನ್ನಡದಲ್ಲಿ ‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ಶಿವರಾಜಕುಮಾರ್​ಗೆ ನಾಯಕಿಯಾಗಿ ನಟಿಸಿದ್ದು ಗೊತ್ತಿದೆ. ಈಗ ಅವರ ಮಗಳು ಸಹ ಕನ್ನಡಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ, ಇದೀಗ ‘ಕ್ಯೂ’ ಎಂಬ ಹೊಸ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ನಾಯಕಿಯಾಗಿ ಭಾಗ್ಯಶ್ರೀ ಮಗಳು ಆವಂತಿಕಾ ಆಯ್ಕೆಯಾಗಿದ್ದಾರೆ.

    ಆವಂತಿಕಾ ಮೊದಲಿಗೆ ಬಣ್ಣ ಹಚ್ಚಿದ್ದು, ‘ಮಿಥ್ಯ’ ಎಂಬ ವೆಬ್​ಸರಣಿಗಾಗಿ. ಈ ಸರಣಿಯು ಜೀ5ನಲ್ಲಿ ಫೆ.18ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ, ಅವರಿಗೆ ಬೇರೆಬೇರೆ ಚಿತ್ರರಂಗಗಳಿಂದ ಆಫರ್​ಗಳು ಬರುತ್ತಿವೆ. ಈಗಾಗಲೇ ಬೆಲ್ಲಂಕೊಂಡ ಗಣೇಶ್ ಅಭಿನಯದ ತೆಲುಗು ಚಿತ್ರವೊಂದರಲ್ಲಿ ಆವಂತಿಕಾ ನಟಿಸುತ್ತಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿಬಂದಿತ್ತು. ಈಗ ‘ಕ್ಯೂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

    ‘ಕ್ಯೂ’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಪ್ರೇಮಿಗಳ ದಿನದ ಪ್ರಯುಕ್ತ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಸಾವನೂರ್ ಮತ್ತು ನಾಗಶೇಖರ್ ಜತೆಯಾಗಿ ನಿರ್ವಿುಸುತ್ತಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತವಿದೆ. ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಈ ಚಿತ್ರ ಬಿಡಗಡೆಯಾಗುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

    ‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts