ತಂದೆ ನೆನೆದು ಭಾವುಕ ಪೋಸ್ಟ್​ ಮಾಡಿದ ನಟಿ ಅಂಕಿತಾ ಲೋಖಂಡೆ...| Ankita Lokhande

untitled-design-88-689c7083bf19a
Published on

Ankita Lokhande: ನಟಿ ಅಂಕಿತ ಲೋಖಂಡೆ ತಮ್ಮ ತಂದೆಯ ಪುಣ್ಯದಿನದಂದು ತಂದೆಯನ್ನು ನೆನೆದು ನೀವು ನಿಧನರಾಗಿ ಮೂರು ವರ್ಷಗಳು ಕಳೆದಿವೆ ಆದರೆ, ಇನ್ನೂ ನಿನ್ನೆಯಷ್ಟೇ ಘಟನೆ ನಡೆದಿದೆ ಎಂದು ಭಾಸವಾಗುತ್ತಿದೆ ಎಂದು ಭಾವುಕ ಸಾಲುಗಳನ್ನು ಬರೆದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಚ್ಚಿಕೊಂಡಿದ್ದಾರೆ.

ಅಂಕಿತಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತನ್ನ ತಾಯಿ ಹಾಗೂ ದಿವಂಗತ ತಂದೆಯೊಂದಿಗೆ ಇರುವ ಫೋಟೋವನ್ನು ಪೋಸ್ಟ್​ ಮಾಡಿ, ನನ್ನ ತಂದೆ 2022ರಲ್ಲಿ ನಿಧನರಾಗಿದ್ದು, ನನಗೆ ತುಂಬಾ ಆಪ್ತರಾಗಿದ್ದರು ಎಂದು ಭಾವುಕ ಸಾಲುಗಳನ್ನು ಬರೆಯುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಅಂಕಿತ ಲೋಖಂಡೆ ಇತ್ತೀಚೆಗೆ ತಂದೆಯ ನೆನೆದು ಹಂಚಿಕೊಂಡಿರುವ ಪೋಸ್ಟ್​ ಎಲ್ಲೆಡೆ ವೈರ್​ ಆಗುತ್ತಿದ್ದು, ಅದಕ್ಕೆ ಹೃದಯೀಸ್ಪರ್ಶಿ ಸಾಲುಗಳನ್ನು ನೀಡಿದ್ದಾರೆ. "ಕೆಲವು ಗಾಯಗಳು ಎಂದಿಗೂ ಗುಣವಾಗುವುದಿಲ್ಲ... ನಾವು ಅವುಗಳನ್ನು ನಿಭಾಯಿಸಲು ಕಲಿಯುತ್ತೇವೆ. ನಿಮ್ಮ ಅಗಲಿಕೆ ಇಂದಿಗೆ 3 ವರ್ಷ ಕಳೆದಿದೆ. ಆದರೆ ನಿನ್ನೆ ನಡೆದಂತೆ ಭಾಸವಾಗುತ್ತಿದೆ. ನಿಮ್ಮಂತಹ ತಂದೆಯನ್ನು ಪಡೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ.

ನೀವು ನನ್ನ ನಾಯಕ, ನನ್ನ ಸ್ನೇಹಿತ, ನನ್ನ ದೊಡ್ಡ ಶಕ್ತಿ ಆಗಿದ್ದೀರಿ. ಆದರೆ ಇಂದು ನಮಗೆ ನೆನಪುಗಳು ಮಾತ್ರ ಉಳಿದಿವೆ. ನಿಮ್ಮ ಪ್ರಾರ್ಥನೆಗಳು ನನಗೆ ಮುಂದುವರಿಯಲು ಶಕ್ತಿಯನ್ನು ನೀಡುತ್ತವೆ. ಅಪ್ಪಾ, ನಿಮ್ಮ ಉಪಸ್ಥಿತಿ ನನಗೆ ತುಂಬಾ ವಿಶೇಷವಾಗಿತ್ತು. ಅಮ್ಮ, ಅರ್ಪಣ್ ಮತ್ತು ನಾನು ಪ್ರತಿದಿನ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಹಾಗೂ ಪ್ರೀತಿಸುತ್ತೇವೆ. ಇನ್ನು ಅಂಕಿತಾ ತಮ್ಮ ಸಾಲುಗಳನ್ನು ಮುಂದುವರೆಸಿದ್ದು,

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರು ಪ್ರೀತಿಪಾತ್ರರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದುಃಖ ಎಂದಿಗೂ ಸಣ್ಣದಲ್ಲ, ನಾವು ಅದರೊಂದಿಗೆ ಬದುಕಲು ಕಲಿಯುತ್ತೇವೆ. ಈಗ ನಮ್ಮೊಳಗೆ ತುಂಬಾ ಜಾಗವಿದೆ, ಪ್ರೀತಿ ಮತ್ತು ನಷ್ಟದ ನೋವು ಎರಡೂ ಅದರಲ್ಲಿ ವಾಸಿಸಬಹುದು. ಪ್ರೀತಿ ಮತ್ತು ನೆನಪುಗಳು ನನ್ನ ತಂದದೆ ಎಂದು ಹೃದಯೀಸ್ಪರ್ಶಿ ಸಾಲುಗಳನ್ನು ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net