

ಬೆಂಗಳೂರು : ಕರೊನಾ ಪರಿಸ್ಥಿತಿಯಿಂದ ಕೆಲಸಕ್ಕೆ ಅವಕಾಶವಿಲ್ಲದ ಈ ಸಮಯದಲ್ಲಿ ಚಿತ್ರರಂಗದ ಜ್ಯೂನಿಯರ್ ಆರ್ಟಿಸ್ಟ್ಗಳಿಗೆ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ನಟ ವಿನೋದ್ ರಾಜ್ ನೆರವಾಗಿದ್ದಾರೆ. ಬೆಂಗಳೂರಿನ ಸುಮನಹಳ್ಳಿ ಬಳಿ ವಾಸಿಸುತ್ತಿರುವ 200 ಕಲಾವಿದರ ಕುಟುಂಬಗಳಿಗೆ ಇಂದು ಆಹಾರ ಕಿಟ್ಗಳನ್ನು ವಿತರಿಸಿದ್ದಾರೆ.
ತಾವೇ ಸಂಕಷ್ಟದಲ್ಲಿದ್ದರೂ ಇತರ ಕಲಾವಿದರ ನೆರವಿಗೆ ನಿಂತು ತಾಯಿ-ಮಗ ಮಾನವೀಯತೆ ಮೆರೆದಿದ್ದಾರೆ. ಚಿತ್ರರಂಗದಿಂದ ದೂರ ಉಳಿದರೂ, ಕಿರಿಯ ಕಲಾವಿದರಿಗೆ ಸಹಾಯಹಸ್ತ ಚಾಚುತ್ತಿರುವ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್, ಕೃಷಿ ಚಟುವಟಿಕೆಯಿಂದ ಬಂದ ಆದಾಯದಲ್ಲಿ ಕಲಾವಿದರಿಗೆ ಫುಡ್ ಕಿಟ್ ಪಡೆದು ವಿತರಿಸಿದ್ದಾರೆ ಎನ್ನಲಾಗಿದೆ.