More

    ಈ ನಟನ ಜೀವನದಲ್ಲಿ ಅನೇಕ ಸುಂದರಿಯರು ಬಂದರೂ ಯಾರೂ ಜೊತೆಗೆ ಇರಲಿಲ್ಲ!   

    ಬೆಂಗಳೂರು: 70 ರ ದಶಕದಲ್ಲಿ ಅನೇಕ ನಟರು ಸಿನಿ ಕ್ಷೇತ್ರ ಪ್ರವೇಶಿಸಿದರು. ಇವರಲ್ಲಿ ಒಬ್ಬರು ವಿನೋದ್ ಖನ್ನಾ. ವಿನೋದ್ ಖನ್ನಾ ತಮ್ಮ ಅದ್ಭುತ ನಟನೆಗೆ ಹೆಸರುವಾಸಿ. ಇವರಿಗೆ ಇಬ್ಬರು ಪುತ್ರರು. ಅವರೇ ರಾಹುಲ್ ಮತ್ತು ಅಕ್ಷಯ್ ಖನ್ನಾ. ಇವರೂ ಸಹ ನಟನಾ ಜಗತ್ತಿಗೆ ಸೇರಿದವರು. ಇಂದು ಮಾರ್ಚ್ 28. ಅಕ್ಷಯ್ ಖನ್ನಾ ತಮ್ಮ 49 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ಅಕ್ಷಯ್ ಖನ್ನಾ 90 ರಿಂದ 2000 ರವರೆಗೆ ಅನೇಕ ದೊಡ್ಡ ನಟಿಯರೊಂದಿಗೆ ತೆರೆಯ ಮೇಲೆ ರೋಮ್ಯಾನ್ಸ್ ಮಾಡಿದರು. ಆದರೆ ಅವರ ವೃತ್ತಿಜೀವನವು ಅಂದುಕೊಂಡಂತೆ ಇರಲಿಲ್ಲ. ಇಂದು ಅಕ್ಷಯ್ ಖನ್ನಾಗೆ ಸಂಬಂಧಿಸಿದ ಕೇಳಿದ ಮತ್ತು ಕೇಳದ ಕೆಲವು ವಿಷಯಗಳನ್ನು ಇಂದಿಲ್ಲಿ ನೋಡೋಣ..    

    ಕುಟುಂಬದ ಹಿನ್ನೆಲೆ

    ವಿನೋದ್ ಖನ್ನಾ ಮತ್ತು ಗೀತಾಂಜಲಿ ದಂಪತಿಗಳ ಎರಡನೇ ಮಗನೇ ಅಕ್ಷಯ್ ಖನ್ನಾ. ಇವರ ಹಿರಿಯ ಸಹೋದರ ರಾಹುಲ್ ಖನ್ನಾ. ಇವರೂ ಚಿತ್ರರಂಗಕ್ಕೆ ಸೇರಿದವರು. ಅಕ್ಷಯ್ ಖನ್ನಾ ಅವರ ತಾಯಿ ಗೀತಾಂಜಲಿ ಖನ್ನಾ 2018 ರಲ್ಲಿ ನಿಧನರಾದರು, ವಿನೋದ್ ಖನ್ನಾ 2017 ರಲ್ಲಿ ನಿಧನರಾದರು. ವಿನೋದ್ ಖನ್ನಾಗೆ ಎರಡನೇ ಹೆಂಡತಿಯಿದ್ದು, ಸಾಕ್ಷಿ ಖನ್ನಾ ಮತ್ತು ಶ್ರದ್ಧಾ ಖನ್ನಾ ಎಂಬ ಇಬ್ಬರು ಮಕ್ಕಳಿದ್ದಾರೆ.    

    ಅಕ್ಷಯ್ ಖನ್ನಾ ಚಿತ್ರಗಳು

    ಅಕ್ಷಯ್ ಖನ್ನಾ 1997 ರಲ್ಲಿ ಹಿಮಾಲಯ ಪುತ್ರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ ಫ್ಲಾಪ್ ಆದರೆ, ಅವರ ಮುಂದಿನ ಚಿತ್ರ ‘ಬಾರ್ಡರ್’ ಸೂಪರ್ ಹಿಟ್ ಆಗಿತ್ತು. ಇದು ಅಕ್ಷಯ್ ಅವರ ಸೋಲೋ ಚಿತ್ರವಲ್ಲ. ಬಹುತಾರಾಗಣದ ಚಿತ್ರ. ಈ ಚಿತ್ರದಿಂದ ಗುರುತಿಸಿಕೊಂಡ ಮೇಲೆ ಅಕ್ಷಯ್ ನಂತರದ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ವಿಫಲವಾದವು. ಇದಾದ ನಂತರ ಅಕ್ಷಯ್ ಖನ್ನಾ ಅಭಿನಯದ ‘ತಾಲ್’ ಚಿತ್ರ ಬಂದಿದ್ದು ಅದು ಬ್ಲಾಕ್ ಬಸ್ಟರ್ ಆಯಿತು. ಇದರಲ್ಲಿ ಅವರ ಎದುರು ಐಶ್ವರ್ಯಾ ರೈ ನಟಿಸಿದರು. ಅಕ್ಷಯ್ ಖನ್ನಾ ‘ದಿಲ್ ಚಾಹ್ತಾ ಹೈ’, ‘ಹಂಗಾಮಾ’, ‘ರೇಸ್’, ‘ಹಲ್ಚಲ್’, ‘ಹಮ್ರಾಜ್’, ‘ದೃಶ್ಯಂ 2’, ‘ನೋ ಪ್ರಾಬ್ಲಂ’ ಮುಂತಾದ ಯಶಸ್ವಿ ಚಿತ್ರಗಳನ್ನು ಮಾಡಿದ್ದಾರೆ.

    ಅಕ್ಷಯ್ ಖನ್ನಾ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಬ್ಯುಸಿನೆಸ್ ಗಳಲ್ಲಿ ತೊಡಗಿದ್ದರು. ಆದರೆ ಇನ್ನೂ ಮದುವೆಯಿಂದ ದೂರವಿದ್ದಾರೆ. ಒಂದು ಸಮಯದಲ್ಲಿ, ಅಕ್ಷಯ್ ಕರಿಷ್ಮಾ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅಕ್ಷಯ್ ಅವರು ಐಶ್ವರ್ಯಾ ಅವರೊಂದಿಗೆ ‘ತಾಲ್’ ಮತ್ತು ಆ ಅಬ್ ಲೌಟ್ ಚಲೆನ್ ಎಂಬ ಎರಡು ಚಿತ್ರಗಳನ್ನು ಮಾಡಿದ್ದಾರೆ. ಆ ಸಮಯದಲ್ಲಿ ಅಕ್ಷಯ್ ಐಶ್ವರ್ಯಾ ಜೊತೆ ಕ್ರಶ್ ಹೊಂದಿದ್ದರು ಎಂದು ವರದಿಯಾಗಿದೆ. ಆದರೆ ಐಶ್ವರ್ಯಾ ಕಡೆಯಿಂದ ಯಾವುದೇ ಸುದ್ದಿಯಿಲ್ಲ.  ಅಕ್ಷಯ್‌ಗೆ ಸೌತ್ ನಟಿ ಶ್ರಿಯಾ ಸರಣ್ ಜೊತೆಗೂ ಅಫೇರ್ ಇತ್ತು ಎಂದು ಹೇಳಲಾಗಿದ್ದರೂ ಅವರಿಬ್ಬರೂ ಕೂಡ ಶಾಶ್ವತವಾಗಿ ಒಟ್ಟಿಗೆ ಇರಲು ಸಾಧ್ಯವಾಗಲಿಲ್ಲ.

    ತಾರಾ ಶರ್ಮಾ ಜೊತೆ ಕೂಡ ಸಂಬಂಧ ಹೊಂದಿದ್ದರು. ಆದರೆ ಎರಡು ವರ್ಷಗಳ ನಂತರ ಅವರು ಬೇರ್ಪಟ್ಟರು. ಈ ಮೂಲಕ ಅಕ್ಷಯ್ ಜೀವನದಲ್ಲಿ ಅನೇಕ ಸುಂದರಿಯರು ಬಂದರೂ ಯಾರೂ ಜತೆಗೆ ಉಳಿಯಲಿಲ್ಲ. ಆದ್ದರಿಂದಲೇ ಅಕ್ಷಯ್ ಖನ್ನಾ ಈಗಲೂ  ಒಂಟಿಯಾಗಿದ್ದಾರೆ.

    ಅಕ್ಷಯ್ ಖನ್ನಾ ಕಳೆದ ಕೆಲವು ವರ್ಷಗಳಲ್ಲಿ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದರೂ, ಅವುಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿಲ್ಲ. ಅಕ್ಷಯ್ ಖನ್ನಾ ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳಿಂದ ದೂರವಿದ್ದರೂ ಕೆಲವು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಲೈಮ್ ಲೈಟ್ ನಲ್ಲಿರಲು ಇಷ್ಟಪಡುವುದಿಲ್ಲ.   

    ಕೇಜ್ರಿವಾಲ್ ರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಲ್ಲಿಸಿದ್ದ ಅರ್ಜಿ ತಿರಸ್ಕೃತ, ದೆಹಲಿ ಹೈಕೋರ್ಟ್ ಹೇಳಿದ್ದೇನು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts