ಬೆಂಗಳೂರು: ತೆಲುಗು ನಟ ನರೇಶ್ ವಿಜಯ ಕೃಷ್ಣ ಮತ್ತು ನಟಿ ಪವಿತ್ರಾ ಲೋಕೇಶ್ ಅವರು ನಾಲ್ಕನೇ ಮದುವೆಯಾಗಿರುವುದು ದೊಡ್ಡ ಚರ್ಚೆಯಾಗಿದೆ. ಈ ಮದುವೆ 44 ವರ್ಷದ ಪವಿತ್ರಾ ಅವರ ಮೂರನೇ ಮದುವೆಯಾಗಿದೆ, 58 ವರ್ಷ ವಯಸ್ಸಿನ ನರೇಶ್ ನಾಲ್ಕನೇ ಬಾರಿಗೆ ವಿವಾಹವಾಗಿದೆ.
ಪವಿತ್ರಾ ಮತ್ತು ನರೇಶ್ ಹೋಟೆಲ್‌ನಲ್ಲಿ ಒಟ್ಟಿಗೆ ಇದ್ದಾಗ, ನರೇಶ್ ಅವರ ಮೂರನೇ ಹೆಂಡತಿ ಬಂದು ಮಾಧ್ಯಮಗಳೊಂದಿಗೆ ಜಗಳವಾಡಿದಾಗ, ಅವರ ಸಂಬಂಧವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿಯಾಗಿತ್ತು. ಆ ನಂತರ ಇಬ್ಬರು ಮದುವೆಯ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿ ಏಳು ಹೆಜ್ಜೆ ಹಾಕಿದರು. ಇತ್ತೀಚೆಗಷ್ಟೇ ಇವರಿಬ್ಬರ ಪ್ರೇಮಕಥೆಯನ್ನು ‘ಮಲ್ಲಿ ಪೆಳ್ಳಿ’ ಎಂಬ ಸಿನಿಮಾವಾಗಿಯೂ ತಂದಿದ್ದಾರೆ ನರೇಶ್. ಇದೀಗ ನರೇಶ್ ಅವರ ಪುತ್ರ ಮೊದಲ ಬಾರಿಗೆ ತನ್ನ ತಂದೆ ಮದುವೆ ಕುರಿತಾಗಿ ಮಾತನಾಡಿದ್ದಾರೆ.
ಈ ಪ್ರೇಮ-ವಿವಾಹದ ವಿಚಾರದಲ್ಲಿ ನರೇಶ್ ಅವರ ಮೂರನೇ ಪತ್ನಿ ಹೊರತುಪಡಿಸಿ ಕುಟುಂಬದ ಇತರ ಸದಸ್ಯರು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲಿಲ್ಲ. ಇತ್ತೀಚೆಗೆ ನರೇಶ್ ಅವರ ಪುತ್ರ ನವೀನ್ ವಿಜಯ್ ಕೃಷ್ಣ ಮಾತನಾಡಿದರು. ಸಾಯಿ ಧರಮ್ ತೇಜ್ ನಾಯಕನಾಗಿ ನವೀನ್ ನಿರ್ದೇಶನದ ಸತ್ಯ ಎಂಬ ಸಿನಿಮಾ ತೆಗೆದಿದ್ದಾರೆ. ಸಂದರ್ಶನವೊಂದರಲ್ಲಿ ನವೀನ್‌ಗೆ ತಂದೆಯ ಮದುವೆಯ ಬಗ್ಗೆ ಕೇಳಲಾಯಿತು.
ನವೀನ್ ಮಾತನಾಡಿ, “ ನರೇಶ್- ಪವಿತ್ರಾ ಮಾತ್ರ ಹಾಗೆ ಮಾಡಲಿಲ್ಲ. ಹಾಗೆ ಮಾಡಿದವರು ಅನೇಕರಿದ್ದಾರೆ. ಇದರಲ್ಲಿ ಯಾವುದೇ ಸಾಮಾಜಿಕ ಸಂದೇಶವಿಲ್ಲ. ಜೀವನದ ಕೊನೆಯವರೆಗೂ ಶಾಂತಿ, ನೆಮ್ಮದಿಯಿಂದ ಬಾಳುವುದೇ ಪ್ರತಿಯೊಬ್ಬರ ಗುರಿ. ಯಾರಾದರೂ ಏನು ಯೋಚಿಸುತ್ತಾರೆ ಎಂದು ನಾವು ಹೆದರುತ್ತಿದ್ದರೆ ನಾವು ಸಂತೋಷವಾಗಿರಲು ಸಾಧ್ಯವಿಲ್ಲ. ನನ್ನ ಅಜ್ಜಿ (ವಿಜಯ ನಿರ್ಮಲಾ) ನಮಗೆ ಇದನ್ನು ಮಾಡು ಅಥವಾ ಹೀಗೆ ಮಾಡು ಎಂದು ಎಂದಿಗೂ ಹೇಳಲಿಲ್ಲ. ನಮಗೆ ಇಷ್ಟ ಬಂದಂತೆ ಬದುಕಲು ಸ್ವಾತಂತ್ರ್ಯ ನೀಡಲಾಗಿದೆ. ಅದನ್ನೇ ನನ್ನ ತಂದೆ ಅನುಸರಿಸುತ್ತಾರೆ” ಎಂದಿದ್ದಾರೆ.
ನಾನೊಬ್ಬ ಮಗನಾಗಿ ಅವರು ಸಂತೋಷವಾಗಿರಲಿ ಎಂದು ಬಯಸುತ್ತೇನೆ. ಏನು ಮಾಡಬೇಕೆಂದು ತಂದೆಗೆ ತಿಳಿದಿದೆ, ನಾವು ಇಷ್ಟಪಡುವದನ್ನು ಮಾಡುವುದು ಸರಿಯಾದ ಕೆಲಸ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಚೆಸ್ ವಿಶ್ವಕಪ್ 2023: ಫೈನಲ್‌ನಲ್ಲಿ ಕಾರ್ಲಸನ್ ವಿರುದ್ಧ ಸೋಲು ಕಂಡ ಪ್ರಜ್ಞಾನಂದ