ಚೆಸ್ ವಿಶ್ವಕಪ್ 2023: ಫೈನಲ್‌ನಲ್ಲಿ ಕಾರ್ಲಸನ್‌ ವಿರುದ್ಧ ಸೋಲು ಕಂಡ ಪ್ರಜ್ಞಾನಂದ

Chess World Cup Final HIGHLIGHTS Carlsen wins maiden World Cup as Praggnanandhaa finishes 2nd
Published on

ನವದೆಹಲಿ: ಪ್ರತಿಷ್ಠಿತ ಚೆಸ್ ವಿಶ್ವಕಪ್​ನ ಫೈನಲ್​​ನಲ್ಲಿ ಭಾರತದ ಬಾಲಕ ಪ್ರಜ್ಞಾನಂದ ಚೆಸ್ ವಿಶ್ವಕಪ್​ನ ಫೈನಲ್​ ಆಡಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲಸನ್‌ ಚಾಂಪಿಯನ್‌ ಆಗಿದ್ದು, ಇದರೊಂದಿಗೆ ಚೊಚ್ಚಲ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದ ಪ್ರಜ್ಞಾನಂದ ಅವರಿಗೆ ನಿರಾಸೆಯಾಗಿದೆ.

ನಿನ್ನೆ ನಡೆದ ಚೆಸ್ ವಿಶ್ವಕಪ್​ ಫೈನಲ್​ನ 2ನೇ ಆಟವೂ ಸಹ ಡ್ರಾನಲ್ಲಿ ಅಂತ್ಯಗೊಂಡಿತ್ತು. ಭಾರತದ ಯುವ ಪ್ರತಿಭೆ ಆರ್​. ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲಸನ್‌ ಪಂದ್ಯ ಡ್ರಾ ಆದ ಕಾರಣ ಇಂದು ಟೈ ಬ್ರೇಕರ್‌ ಪಂದ್ಯ ನಡೆಯಿತು.  ಮಂಗಳವಾರ ನಡೆದ ಮೊದಲ ಫೈನಲ್‌ ಪಂದ್ಯವೂ ಸಹ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ 2ನೇ ಪಂದ್ಯ ಡ್ರಾ ಆದ ಕಾರಣ ಟೈಬ್ರೇಕರ್ ಪಂದ್ಯದ​ ಮೂಲಕ ಫಲಿತಾಂಶ ನಿರ್ಧರವಾಗಲಿದೆ ಎಂದು ಹೇಳಲಾಗಿತ್ತು.

ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್​ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್​ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಕೋಟ್ಯಾಂತರ ಭಾರತೀಯ ಪ್ರಾರ್ಥನೆ ಈಡೇರಲಿಲ್ಲ.

ಚೆಸ್ ವಿಶ್ವಕಪ್​ನ ಫೈನಲ್ ಸೋಲಿನ ಹೊರತಾಗಿಯೂ ಆರ್​ ಪ್ರಜ್ಞಾನಂದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಈ ಟೂರ್ನಿಯಲ್ಲಿ ಫೈನಲ್​ ಆಡಿದ ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ 18 ರ ಹರೆಯದ ಯುವ ಚೆಸ್ ಪಟು ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net