ಅಪಘಾತದ ಬಳಿಕ ಕಿರಣ್​ ರಾಜ್​ ಫಸ್ಟ್​ ರಿಯಾಕ್ಷನ್​; ಅನುಕಂಪ ಗಿಟ್ಟಿಸಿಕೊಳ್ಳಲು ಹೋಗಿ ಅಪಹಾಸ್ಯಕ್ಕೆ ಈಡಾದ್ರಾ ನಟ?

Kiran Raj
Published on

ಬೆಂಗಳೂರು: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್​ ರಾಜ್​ಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು, ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ಇದೇ ಮೊದಲ ಬಾರಿಗೆ ನಟ ರಿಯಾಕ್ಟ್​​ ಮಾಡಿದ್ದು, ತಾವು ಆರೋಗ್ಯವಾಗಿರುವುದಾಗಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಏನಾಗಿದೆ ಅನ್ನೋದು ನಿಮಗೆಲ್ಲಾ ಮಾಹಿತಿ ಸಿಕ್ಕಿರುತ್ತದೆ. ಯಾರೆಲ್ಲಾ ಪ್ಯಾನಿಕ್ ಆಗಿ ಮೆಸೇಜ್ ಮಾಡುತ್ತಿರೋ ಚಿಂತಿಸಬೇಡಿ. ನಾನು ಈಗ ಆರೋಗ್ಯವಾಗಿದ್ದೇನೆ. ಸ್ವಲ್ಪ ಏಟಾಗಿತ್ತು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದಯವಿಟ್ಟು ಯಾರು ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಧನ್ಯವಾದಗಳು. ನಾನೀಗ ಆರೋಗ್ಯವಾಗಿದ್ದೇನೆ ಎಂದು ಕಿರಣ್ ರಾಜ್ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದರೆ, ಕಿರಣ್​ ರಾಜ್​ ಅವರ ಆರೋಗ್ಯದ ಕುರಿತು ವಿಡಿಯೋ ಹೊರಬೀಳುತ್ತಿದ್ದಂತೆ ಅನುಕಂಪ ಗಿಟ್ಟಿಸಿಕೊಳ್ಳಲು ಹೋಗಿ ಅಪಹಾಸ್ಯಕ್ಕೆ ಈಡಾದ್ರಾ ಎಂಬ ಅನುಮಾನ ಮೂಡಲು ಶುರುವಾಗಿದೆ. ಏಕೆಂದರೆ ನಟ ಕಿರಣ್​ ರಾಜ್​ ನಾಯಕನಾಗಿ ನಟಿಸಿರುವ ರಾನಿ ಚಿತ್ರವು ಸೆಪ್ಟೆಂಬರ್​ 12ರಂದು ಬಿಡುಗಡೆಯಾಗುತ್ತಿದ್ದು, ಅಪಘಾತದ ಕಥೆ ಕಟ್ಟಿ ಪ್ರಚಾರ ಪಡೆಯಲು ಕಿರಣ್​ ರಾಜ್​ ಮುಂದಾದ್ರಾ ಎಂಬ ಅನುಮಾನ ಮೂಡಲು ಶುರುವಾಗಿದೆ.

ತಮ್ಮ ಆರೋಗ್ಯದ ಕುರಿತು ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ನಟನಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲದಿರುವುದು ಕಂಡು ಬಂದಿದ್ದು, ಮದ್ಯಾಹ್ನ 3 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ನಾಳೆ ಸಿನಿಮಾ ರಿಲೀಸ್ ಆಗ್ತಿರೋ ಹಿನ್ನೆಲೆ ನಟ ಅಪಘಾತದ ಪ್ಲ್ಯಾನ್​ ಮಾಡಿದ್ರಾ ಅನ್ನೋ ಅನುಮಾನ ಮೂಡಿದೆ. ಕಾರು ಚಾಲನೆ ಮಾಡುತ್ತಿದ್ದ ಗಿರೀಶ್​ ಕೂಡ ಆರಾಮಾಗಿದ್ದು, ಇವರ ನಡೆಯ ಬಗ್ಗೆ ಅನುಮಾನ ಮೂಡಲು ಶುರುವಾಗಿದೆ.

ನಡೆದಿದ್ದೇನು?

ಕೆಂಗೇರಿಯ ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳುತ್ತಿದ್ದರು. ಈ ಕೇಂದ್ರಕ್ಕೆ ಪ್ರತಿವಾರ ಭೇಟಿ ನೀಡಿ ಅನಾಥ ಮಕ್ಕಳಿಗೆ ಊಟ ನೀಡುತ್ತಿದ್ದರು. ನಾಳೆ (ಸೆ.12) ಕಿರಣ್ ರಾಜ್​​ ಅಭಿನಯದ ರಾನಿ ಸಿನಿಮಾ ರಿಲೀಸ್ ಹಿನ್ನೆಲೆ ಎರಡು ದಿನಗಳ ಮುಂಚೆಯೇ ಆಹಾರ ನೀಡಲು ಹೋಗಿದ್ದರು. ಈ ನಡುವೆ ಅಪಘಾತ ಸಂಭವಿಸಿದ್ದು, ತೀವ್ರ ನಿಘಾ ಘಟಕದಲ್ಲಿ ಇರಿಸಿ ನಟನಿಗೆ ಚಿಕಿತ್ಸೆ ನೀಡಲಾಗಿತ್ತು.

ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಕಿರಣ್​ ರಾಜ್​ ಜತೆ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಇದ್ದರು. ಅವರು ಸೀಟ್ ಬೆಲ್ಟ್ ಧರಿಸಿದ್ದರಿಂದ ಬಚಾವ್​ ಆಗಿದ್ದಾರೆ. ಆದರೆ, ಕಿರಣ್​ ರಾಜ್​ ಅವರ ಎದೆ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿರುವುದರಿಂದ ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್​ಗೆ ದಾಖಲಿಸಲಾಗಿದೆ. ಗಿರೀಶ್ ಅವರು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ರಸ್ತೆಗೆ ಅಡ್ಡಲಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ, ಗುದ್ದಿದ ರಭಸಕ್ಕೆ ಕಾರಿನ ಮುಂಭಾಗದ ಟೈರ್ ಕಿತ್ತುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net