ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೆಳತಿ ಪವಿತ್ರಾ ಗೌಡಗೆ ಆಶ್ಲೀಲವಾಗಿ ಮೆಸ್ಸೇಜ್ ಮಾಡಿದ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಜೈಲು ಸೇರಿರುವ ನಟ ದರ್ಶನ್ ಮತ್ತು ಸಹಚರರಿಗೆ ಸದ್ಯಕ್ಕೆ ಜಾಮೀನು ಸಿಗುವುದು ಡೌಟ್ ಎಂದು ಹೇಳಲಾಗಿದ್ದು, ಮುಂದಿನ ಕೆಲ ತಿಂಗಳುಗಳ ಕಾಲ ಜೈಲೂಟ ಕಾಯಂ ಆಗಲಿದೆ.
ಚಾರ್ಜ್ಶೀಟ್ನ ಪುಟ ತೆರೆದಂತೆಲ್ಲಾ ನಟ ದರ್ಶನ್ ಮತ್ತು ಗ್ಯಾಂಗ್ನ ಕರಾಳ ಮುಖ ಒಂದೊಂದೇ ಬಯಲಾಗುತ್ತಿದ್ದು, ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಒಬ್ಬ ಸ್ಟಾರ್ನಟನ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಚಿತ್ರರಂಗದ ಹಿರಿಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಈ ಬಗ್ಗೆ ಮಾತನಾಡುತ್ತಿದ್ಧಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ನಟ ದರ್ಶನ್ ಹೀಗಾಗಲೂ ಕಾರಣವನ್ನು ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟ ಜಗ್ಗೇಶ್, ದರ್ಶನ್ 25 ಕೋಟಿ ದುಡಿಯುವ, 5000ಂದ 100 ಮಂದಿಗೆ ಕೆಲಸ ಕೊಡುವ ಹೀರೋ. ಅವರನ್ನು ಪ್ರೀತಿಸುವ, ಅಭಿಮಾನಿಸುವ ನಿಜವಾದ ಅಭಿಮಾನಿಗಳು ಇದ್ದಾರೆ. ಆದರೆ, ದರ್ಶನ್ ಅವರಿಗೆ ಮಾರ್ಗದರ್ಶನ ಕೊರತೆ ಇದೆ. ಸಹವಾಸ ದೋಷ ಸನ್ಯಾಸಿ ಕೆಟ್ಟ ಅನ್ನೋ ಮಾತು ಇದೆಯಲ್ಲ, ಅದು ಇದೇ ಮನುಷ್ಯನಿಗೆ ತಾಳ್ಮೆ ಮುಖ್ಯ, ಕೋಪ ಒಳ್ಳೆಯದಲ್ಲ.
ಇದನ್ನೂ ಓದಿ: ಅಬಕಾರಿ ಹಗರಣ; ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಜಾಮೀನು ಮಂಜೂರು
ಸೋಶಿಯಲ್ ಮೀಡಿಯಾದಲ್ಲಿ ನನಗೂ ನಿತ್ಯ ಕೆಟ್ಟ ಕಾಮೆಂಟ್ ಬರುತ್ತದೆ. ಜನಪ್ರಿಯರ ಮೇಲೆ ಕಲ್ಲು ತೂರಿದರೆ ತಾವು ಸ್ಟಾರ್‌ಗಳು ಆಗಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಸ್ಟ್ಗೂ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ನಾನು ಅಂತಹವರ ವಿರುದ್ಧ ಸೈಬರ್ಕ್ರೈಂಗೆ ದೂರು ನೀಡಿದ್ಧೇನೆ. ಇಂದು ಪೊಲೀಸ್ ಇಲಾಖೆ, ಕಾನೂನು ಇದೆ. ಎಂಥದ್ದೇ ಕಾಮೆಂಟ್ ಬಂದರೂ ಅದನ್ನು ಕಾನೂನಿನ ಮೂಲಕ ಪರಿಹರಿಸಿಕೊಳ್ಳಬಹುದಿತ್ತು.
ನಮ್ಮ ದೇಶದ ಕಾನೂನು, ಪೊಲೀಸ್ ಇಲಾಖೆಗೆ ದೊಡ್ಡ ಶಕ್ತಿ ಇದೆ. ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಂಡು ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದ ಆ ವ್ಯಕ್ತಿ ಮೇಲೆ ಪೊಲೀಸರಿಗೆ ದೂರು ಕೊಟ್ಟು ಕಾನೂನಿನ ಮೂಲಕ ಪಾಠ ಕಲಿಸಿ, ನೋಡಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹೆಜ್ಜೆ ಹಾಕಿದರೆ ಇದೇ ರೀತಿ ಆಗುತ್ತದೆ. ಎಂದು ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ಕೊಡುವ ಅವಕಾಶ ದರ್ಶನ್ ಅವರ ಮುಂದಿತ್ತು. ಆದರೆ, ಆಗಿದ್ದೇ ಬೇರೆ. ಅದಕ್ಕೆ ಮುಂದಿನದ್ದು ಕಾನೂನಿಗೆ ಬೇಸರ, ನೋವಿದೆ. ಬಿಟ್ಟುಬಿಡೋಣ ಎಂದು ನಟ ಜಗ್ಗೇಶ್ ಹೇಳಿದ್ದಾರೆ.