ಮಲ್ನಾಡ್​ ಮಂಕಿಯನ್ನು ನೋಡ್ಬೇಕಾ?; ದಿಗಂತ್​ ತೋರಿಸ್ತಿದ್ದಾರೆ ನೋಡಿ..

collage (11)
Published on

ಬೆಂಗಳೂರು: ಫಿಟ್​ನೆಸ್​ ವಿಚಾರವಾಗಿ ಸೈಕಲ್​ ರೈಡಿಂಗ್​, ಕ್ಲೈಂಬಿಂಗ್​, ನನ್​ಚೆಕ್​ ಸೇರಿ ಹಲವು ಜೀವ ರಕ್ಷಕ ಕಲೆಗಳಲ್ಲಿಯೂ ಸಕ್ರಿಯರಾಗಿದ್ದಾರೆ ನಟ ದೂದ್​ ಪೇಡಾ ದಿಗಂತ್​ ಮತ್ತು ಐಂದ್ರಿತಾ. ಇತ್ತೀಚೆಗಷ್ಟೇ ತಮ್ಮ ಕುಟುಂಬದವರ ಜತೆಗೆ ಕೊಡಗಿನ ರಿಸಾರ್ಟ್​ಗೆ ಹೋಗಿ ಒಳ್ಳೆಯ ಸಮಯ ಕಳೆದಿದ್ದ ದಿಗಂತ್​ ಮತ್ತು ಐಂದ್ರಿತಾ ರೇ, ಅದಾದ ಬಳಿಕ ಸೈಕಲ್​ ರೈಡ್​ಗೂ ಹೋಗಿದ್ದರು. ಸ್ನೇಹಿತರ ಜತೆಗೂಡಿ ಬೆಟ್ಟವನ್ನು ಏರಿದ್ದರು. ಇದೀಗ ಮಂಗನಂತೆ ಕಂಬ ಏರಿ, ಸಿಂಗಲ್​ ಬಾರ್​ನಲ್ಲಿ ವ್ಯಾಯಾಮ ಮಾಡಿದ್ದಾರೆ.

ಲಾಕ್​ಡೌನ್ ವೇಳೆಯಲ್ಲಿ ಬಹುತೇಕರು ಅಡುಗೆ, ಓದು, ವ್ಯಾಯಾಮದ ಕಡೆ ಹೆಚ್ಚು ವಾಲಿದ್ದಾರೆ. ಫ್ಯಾಮಿಲಿ ಜತೆ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಅದೇ ರೀತಿ ಸ್ಯಾಂಡಲ್​ವುಡ್ ನಟ ದಿಗಂತ್ ಮಂಚಾಲೆ ಫಿಟ್​ನೆಸ್​ ಸಲುವಾಗಿ ಒಂದಿಲ್ಲೊಂದು ವ್ಯಾಯಾಮದ ಮೊರೆ ಹೋಗುತ್ತಾರೆ. ಇದೀಗ ಮಂಗನಂತೆ ಕಂಬ ಏರಿ ಅದರ ಮೇಲೆಯೇ ವ್ಯಾಯಾಮವನ್ನೂ ಮಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಅವರು, ಮಲ್ನಾಡ್​ ಮಂಕಿ ಎಂಬ ಹೆಸರನ್ನೂ ತಮಗೆ ತಾವೇ ನೀಡಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಹುಟ್ಟುಹಬ್ಬದ ಶುಭಾಶಯಗಳು’, ‘ಮಾರಿಗೋಲ್ಡ್’, ‘ಗಾಳಿಪಟ 2’ ಸೇರಿ ಹಲವು ಸಿನಿಮಾಗಳಲ್ಲಿ ದಿಗಂತ್ ಬಿಜಿಯಾಗಿದ್ದಾರೆ. ಲಾಕ್​ಡೌನ್ ತೆರವಾಗುತ್ತಿದ್ದಂತೆ ಸಿನಿಮಾ ಕೆಲಸಗಳತ್ತ ಗಮನಹರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net