

ಸುಬ್ರಹ್ಮಣ್ಯ: ಶ್ರವಣಬೆಳಗೊಳ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಯೋಗದಲ್ಲಿ ನಡೆಯುವ ಪ್ರಾಕೃತ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಪರೀಕ್ಷೆಯಲ್ಲಿ ಕೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಈ ಕೋರ್ಸಿಗೆ 31 ವಿದ್ಯಾರ್ಥಿಗಳು ದಾಖಲಾಗಿದ್ದರು. ಪ್ರಾಕೃತ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಾದ ಅರ್ಪಿತಾ ಕೆ.ವಿ. ಬೆಳ್ಳಿ ಪದಕ ಮತ್ತು ಕಾವ್ಯಾ ಪಿ. ಕಂಚಿನ ಪದಕ ಪಡೆದಿದ್ದಾರೆ. ಯಕ್ಷಿತಾ ನಾಲ್ಕನೇ ರ‌್ಯಾಂಕ್ ಗಳಿಸಿದ್ದಾರೆ. ಡಿಪ್ಲೊಮಾ ಪರೀಕ್ಷೆಯಲ್ಲಿ ಅನ್ವಿತಾ ಎಂ.ಎನ್. ಮತ್ತು ವಿನುತಾ ಪಿ. ನಾಲ್ಕನೇ ರ‌್ಯಾಂಕ್, ಲಿಖಿತಾ ಡಿ.ಎನ್. 5ನೇ ರ‌್ಯಾಂಕ್ ಸೇರಿದಂತೆ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 7 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಶ್ರವಣಬೆಳಗೊಳದಲ್ಲಿ ಪದವಿ ಪ್ರದಾನ ಮಾಡಲಾಯಿತು. ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಪ್ರಸಾದ ಎನ್. ಹಾಗೂ ಇತಿಹಾಸ ಉಪನ್ಯಾಸಕಿ ನಮಿತಾ ಎಂ.ಎ. ಮಾರ್ಗದರ್ಶನ ನೀಡಿದ್ದರು.