ಚಿಕನ್ ಪೀಸ್​ನಲ್ಲಿ ಗಾಂಜಾ ಸಾಗಿಸಿ ಕೈದಿಗಳಿಗೆ ಸರಬರಾಜು ಮಾಡ್ತಿದ್ದ ಚಾಲಾಕಿಗಳು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Ganja
Published on

ವಿಜಯಪುರ: ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ರೀತಿಯೇ ವಿಭಿನ್ನ! ದರ್ಗಾ ಜೈಲ್ ಖ್ಯಾತಿಯ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದ ಬಗೆ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ.

ಚಿಕನ್ ಪೀಸ್​ನಲ್ಲಿ ಗಾಂಜಾ ಇರಿಸಿ ಅದಕ್ಕೆ ಹೊಲಿಗೆ ಹಾಕಿ ಕೈದಿಗೆ ಸರಬರಾಜು ಮಾಡುತ್ತಿದ್ದ ಚಾಲಾಕಿ ಖದೀಮರನ್ನು ಜೈಲು ಸಿಬ್ಬಂದಿ ಬಂಧಿಸುವ ಮೂಲಕ ಚಾಣಾಕ್ಷತೆ ಮೆರೆದಿದ್ದಾರೆ.

ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಎಂಬಾತ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದನು. ಅದಕ್ಕಾಗಿ ಆತ ಚಿಕನ್ ಪೀಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ಚೀಟಿ ಇರಿಸಿ ಅಚ್ಚುಕಟ್ಟಾಗಿ ಹೊಲಿಗೆ ಹಾಕಿ ಸರಬರಾಜು ಮಾಡುತ್ತಿದ್ದನು.

ಮಾಬರುಖಾನೆಯನ್ನು ಬಂಧಿಸಿರುವ ಜೈಲು ಸಿಬ್ಬಂದಿ ದೊಡ್ಡ ದೊಡ್ಡ ಚಿಕನ್ ಪೀಸ್‌ನಲ್ಲಿದ್ದ 2 ಗ್ರಾಂನಷ್ಟು ಗಾಂಜಾ ತುಂಬಿದ ಒಟ್ಟು 18 ಗಾಂಜಾ ಚೀಟಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net