More

    ನಡು ರಸ್ತೆಯಲ್ಲೇ ಮಾರಕಾಸ್ತ್ರ ಹಿಡಿದು ಯುವತಿಗೆ ಕಿರುಕುಳ; ನೆರವಿಗೆ ಧಾವಿಸಿದ ಮಹಿಳೆ

    ಬೆಂಗಳೂರು: ಹಾಡುಹಗಲೇ ಯುವಕನೊಬ್ಬ ಮಾರಕಾಸ್ತ್ರ ಹಿಡಿದು ಯುವತಿಯೊಬ್ಬಳಿಗೆ ಕಿರುಕುಳ ನೀಡಿರುವ ಪ್ರಕರಣ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಮೇ 15ರಂದು ಘಟನೆ ನಡೆದಿದ್ದು, ಘಟನೆ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ವಿವೇಕಾನಂದ ರೆಸಿಡೆನ್ಸಿ ಬಳಿ ಕೃತ್ಯ ಎಸಗಲಾಗಿದೆ.

    ಪುಲಕೇಶಿನಗರದ ವಿವೇಕಾನಂದ ರೆಸಿಡೆನ್ಸಿ ಬಳಿ ಯುವಕನೊಬ್ಬ ನಡೆದು ಹೋಗುತ್ತಿದ್ದ ಯುವತಿಯ ಬೆನ್ನಟ್ಟುತ್ತಾ ಬಂದಿದ್ದಾನೆ. ಬಳಿಕ ಆತ ಏಕಾಏಕಿ ಮಾರಕಾಸ್ತ್ರ ತೋರಿಸಿ ಯುವತಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ, ಆಕೆಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೆರವಿಗೆ ಧಾವಿಸಿದ ಮಹಿಳೆ

    ಯುವತಿಯ ಚೀರಾಟ ಕೇಳಿದ ಸ್ಥಳೀಯ ಮಹಿಳೆಯೊಬ್ಬರು ಕೂಡಲೇ ಆಕೆಯ ನೆರವಿಗೆ ಧಾವಿಸಿದ್ದಾರೆ. ಯುವತಿ ರಕ್ಷಿಸಲು ಮಹಿಳೆ ಕೂಗಿಕೊಂಡು ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

    harassment (1)

    ಅಸ್ವಸ್ಥಗೊಂಡಿದ್ದ ಯುವತಿಗೆ ಸಮಾಧಾನ ಪಡಿಸಿ ಧೈರ್ಯ ತುಂಬಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವತಿಗೆ ಸಾಂತ್ವನ ಹೇಳಿ, ದೂರು ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ: VIDEO| ನೋಡ ನೋಡುತ್ತಿದ್ದಂತೆ ಇಬ್ಬರನ್ನು ನುಂಗಿದ ನೀರಾನೆ!

    ಗಸ್ತು ಆಗುತ್ತಿಲ್ಲ

    ಘಟನೆಯ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪುಲಕೇಶಿನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಪೊಲೀಸರಿಂದ ಸರಿಯಾಗಿ ಗಸ್ತು ಆಗುತ್ತಿಲ್ಲ. ಹೀಗಾಗಿ ಈ ರೀತಿಯ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts