More

    ಇವರೇ ನೋಡಿ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​? ಗೂಗಲ್​ ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇದು!

    ಬೆಂಗಳೂರು: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಅಂತಿಮ ಹಂತಕ್ಕೆ ಬಂದಿದೆ.​ ವಿನ್ನರ್​ ಯಾರು ಎಂಬುದು ನಾಳೆ ಖಚಿತವಾಗಲಿದೆ. ಈ ಫಿನಾಲೆ ವಾರದಲ್ಲಿ ಬಿಗ್‌ಬಾಸ್ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಒಟ್ಟು ಆರು ಸದಸ್ಯರಿದ್ದಾರೆ.

    ಈ ಬಾರಿ ಯಾರು ಬಿಗ್​ಬಾಸ್​ ವಿನ್ನರ್​ ಆಗಲಿದ್ದಾರೆ ಎಂಬ ಚರ್ಚೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಸಂಗೀತಾ ಶೃಂಗೇರಿ, ವಿನಯ್​ ಗೌಡ, ಕಾರ್ಮಿಕ್​ ಮಹೇಶ್, ಡ್ರೋನ್​ ಪ್ರತಾಪ್​​ ಮತ್ತು ವರ್ತೂರ್​ ಸಂತೋಷ್​ ಹೆಸರು ಕೇಳಿಬರುತ್ತಿದೆ. ಆದರೆ, ಎಲ್ಲರ ಊಹೆಗೆ ನಾಳೆ ಅಂತಿಮ ತೆರೆ ಬೀಳಲಿದೆ. ಇದರ ನಡುವೆ ಓರ್ವ ಸ್ಪರ್ಧಿಯ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಆ ಸ್ಪರ್ಧಿ ಯಾರೆಂದರೆ, ಸಂಗೀತಾ ಶೃಂಗೇರಿ.

    ಹೌದು, ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಸಂಗೀತಾ ಶೃಂಗೇರಿ ಮುಡಿಗೇರಲಿದೆಯಂತೆ. ಈ ಮಾತನ್ನು ಸಾರ್ವಜನಿಕರಾಗಲಿ ಅಥವಾ ಎಲಿಮಿನೇಟ್​ ಆಗಿ ಮನೆಯಿಂದ ಹೊರಬಂದಿರುವ ಸ್ಪರ್ಧಿಗಳಾಗಲಿ ಹೇಳುತ್ತಿಲ್ಲ. ಸ್ವತಃ ಗೂಗಲ್​ನಲ್ಲಿ ಸಂಗೀತಾ ಹೆಸರು ಕೇಳಿಬರುತ್ತಿದೆ. ಅದು ಹೇಗೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು ಗೂಗಲ್​ಗೆ ಹೋಗಿ bigg boss kannada season 10 winner ಎಂದು ಸರ್ಚ್​ ಮಾಡಿದರೆ ಮೊದಲು ಬರುವುದು ಸಂಗೀತಾ ಶೃಂಗೇರಿ ಹೆಸರು.

    BBK 10 Winner

    2024 ಜನವರಿ 27ರಂತೆ ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರ್ಯಾಂಡ್ ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಗೆಲ್ಲುವ ನಿರೀಕ್ಷೆಯಿದೆ ಎಂದು ಗೂಗಲ್​ ಸರ್ಚ್​ನಲ್ಲಿ ತೋರುತ್ತಿದೆ. ವಿಜೇತ ಸ್ಪರ್ಧಿ 50 ಲಕ್ಷ ರೂ. ನಗದು ಮತ್ತು ಒಂದು ಕಾರು ಹಾಗೂ ಟ್ರೋಫಿಯನ್ನು ಬಹುಮಾನವಾಗಿ ಪಡೆಯಲಿದ್ದಾರೆ ಎಂದು ಗೂಗಲ್​ ಸರ್ಚ್​ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ನಾಳೆ ಸಂಜೆ ಗೊತ್ತಾಗಲಿದೆ.

    ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ? ದುಬೈಗೆ ಮರಳಿದ ಮರುಕ್ಷಣವೇ ಮಲಿಕ್​ಗೆ ಬಿಗ್​ ಶಾಕ್​!

    ಲೋಕಸಭೆ ಚುನಾವಣೆ: ರಾಹುಲ್​ ಗಾಂಧಿ ಸ್ಪರ್ಧಿಸುವ ಕ್ಷೇತ್ರವನ್ನು ಬಹಿರಂಗಪಡಿಸಿದ ಸಂಸದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts