ಅಮೆರಿಕಾದಲ್ಲಿ ಅಪಘಾತ; ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಸಾವು | Accident

Accident
Published on

Accident: ಅಮೆರಿಕಾದಲ್ಲಿ ನ್ಯೂಯಾರ್ಕ್​ ಮೂಲದ ಭಾರತೀಯ ಕುಟುಂಬವೊಂದು ಪಶ್ಚಿಮ ವರ್ಜಿನಿಯಾದ ದೇವಸ್ಥಾನವೊಂದಕ್ಕೆ ತೆರಳುವಾಗ ಕಾರು ಅಪಘಾತವಾಗಿದ್ದು, ಸ್ಥಳದಲ್ಲಿಯೇ ನಾಲ್ವರು ಹಿರಿಯರು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಆಶಾ ದಿವಾನ್, ಕಿಶೋರ್ ದಿವಾನ್, ಶೈಲೇಶ್ ದಿವಾನ್ ಹಾಗೂ ಗೀತಾ ದಿವಾನ್  ಎಂದು ಗುರುತಿಸಲಾಗಿದೆ. ನಾಲ್ವರು 85 ವಯಸ್ಸಿನವರು. ನಾಲ್ವರು ಬಫಲೋದಿಂದ ಪಶ್ಚಿಮ ವರ್ಜೀನಿಯಾದ ಮಾರ್ಷಲ್ ಕೌಂಟಿಯಲ್ಲಿರುವ ಪ್ರಭುಪಾದರ ಪ್ಯಾಲೇಸ್ ಆಫ್ ಗೋಲ್ಡ್‌ಗೆ ತೆರಳುತ್ತಿದ್ದರು ಎನ್ನಲಾಗಿದೆ.

ಜುಲೈ 29 ರಂದೇ ನಾಲ್ವರು ಕಾಣೆಯಾಗಿದ್ದಾರೆಂದು ಪೊಲೀಸರು ಹುಡುಕಾಟ ನಡೆಸಿದ್ದರು. 2009ರ ಮಾಡೆಲ್​ನ ನ್ಯೂಯಾರ್ಕ್​ ಪರವಾನಿಗೆ ಹೊಂದಿದ EKW2611 ನಂಬರ್​ ಪ್ಲೇಟ್​ನ ನಿಂಬೆ ಹಸಿರು ಬಣ್ಣದ ಟೊಯೋಟಾ ಕ್ಯಾಮ್ರಿಯಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಪೆನ್ಸಿಲ್ವೇನಿಯಾದ ಬರ್ಗರ್ ಕಿಂಗ್‌ನಲ್ಲಿ ಅವರನ್ನು ಕೊನೆಯ ಬಾರಿಗೆ ನೋಡಲಾಗಿತ್ತು. ನಾಲ್ವರು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದರು. ಅಲ್ಲಿಯೇ ಅವರ ಕೊನೆಯ ಕ್ರೆಡಿಕ್ ಕಾರ್ಡ್ ವಹಿವಾಟು ನಡೆದಿದ್ದು, ನಾಲ್ವರಿಗಾಗಿ ಹುಡುಕಾಟ ನಡೆದಿದೆ ಎಂದು ಅಮೆರಿಕಾದ ಪೊಲೀಸರು ಹೇಳಿದ್ದರು.

ಪ್ರಸ್ತುತ ಮಾಹಿತಿ ಪ್ರಕಾರ ಶನಿವಾರ ರಾತ್ರಿ 9.30ರ ಸುಮಾರಿಗೆ ಬಿಗ್ ವೀಲಿಂಗ್ ಕ್ರೀಕ್ ರಸ್ತೆಯಿಂದ ಕಾರು ಅಪಘಾತವಾಗಿ ಮೈಲು ದೂರದಷ್ಟು ಬಿದ್ದಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರ ತೆಗೆದಿದ್ದಾರೆ ಎಂದು ಮಾರ್ಷಲ್ ಕೌಂಟಿ ಶರಿಫ್ ಮೈಕ್ ಢೌಘರ್ಟಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net