ಬೈಕ್​ಗಳ ಮುಖಾಮುಖಿ ಡಿಕ್ಕಿ; ಎರಡು ವರ್ಷದ ಬಾಲಕಿ ಸ್ಥಳದಲ್ಲೇ ಸಾವು

Girl Died 5 June 20
Published on

ದಾವಣಗೆರೆ: ಎರಡು ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ಎರಡು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಗೌಡಿಕಟ್ಟೆಯಲ್ಲಿ ನಡೆದಿದೆ.

ಒಂದು ಬೈಕ್​​ನಲ್ಲಿ ಇಬ್ಬರು ಪಲ್ಲಾಗಟ್ಟೆಯಿಂದ ಬಣಕಲ್ಲು ಗ್ರಾಮಕ್ಕೆ ತೆರಳುತ್ತಿದ್ದರು. ಇನ್ನೊಂದು ಬೈಕ್​ನಲ್ಲಿ ಮೂವರು ಗಾಣಗಟ್ಟೆಯಿಂದ ಸೂರಡ್ಡಿಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು. ಗೌಡಿಕಟ್ಟೆ ಕ್ರಾಸ್​ ಬಳಿ ಮುಖಾಮುಖಿ ಅಪಘಾತವಾಗಿದೆ.

ಒಟ್ಟು ಮೂವರು ಗಾಯಗೊಂಡಿದ್ದು, ಪುಟ್ಟ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಾಳುಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಡಿಮಾಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net