ಬೆಂಗಳೂರು: ವೇಗವಾಗಿ ಬಂದ ಕಾರು ರಸ್ತೆ ದಾಟುತ್ತಿದ್ದ ಯುವತಿ (30) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ (Accident) ಘಟನೆ ಕೆಂಗೇರಿ ಬಳಿ ನಡೆದಿದೆ.
20 ವರ್ಷದ ಧನುಷ್ ಎಂಬ ಯುವಕ ಕುಡಿದ ಮತ್ತಲ್ಲಿ ವೇಗವಾಗಿ ಕಾರು ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಅಪಘಾತ ಬಳಿಕ ಸ್ಥಳದಿಂದ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಅಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೂಡಲೇ ಕೋರ್ಟ್ಗೆ ಹಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ; K. S. Eshwarappa Press Meet | ವಕ್ಫ್ನಿಂದ ರಾಜ್ಯದಲ್ಲಿ ರಕ್ತಕ್ರಾಂತಿ ಆಗುವ ಬಗ್ಗೆ ಯಾವುದೇ ಅನುಮಾನ ಬೇಡ…
ಇತನ ಮೇಲೆ ಕೊಲೆ ಸಮಾನವಲ್ಲದ ನರಹತ್ಯೆ ಆರೋಪ ಹೊರಿಸಲಾಗಿದೆ. ಖಾಸಗಿ ಬಸ್ ಮಾಲೀಕ ಶಿವ ಎಂಬವವರ ಮಗ ಧನುಷ್ ಎಂದು ಗುರುತಿಸಲಾಗಿದೆ.
ಘಟನೆ ನಡೆದ ತಕ್ಷಣವೇ ಆರೋಪಿಯನ್ನು ಬಂಧಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ಭಾಗದ ಡಿಸಿಪಿ ತಿಳಿಸಿದ್ದಾರೆ.
ಇನ್ನು ಸ್ಥಳೀಯ ಮಾಹಿತಿ ಪ್ರಕಾರ, ಧನುಷ್ ತಂದೆ ಐಷಾರಾಮಿ (ಬೆಂಜ್) ಕಾರನ್ನು ಖರೀದಿಸಿದ್ದರು. ಇದೇ ಕಾರನ್ನು ತಗೆದುಕೊಂಡ ಧನುಷ ಯಶವಂತಪುರ ಮಾಲ್ಗೆ ತೆರಳಿದ್ದರು. ಅಲ್ಲಿ ವಿಪರಿತ ಮದ್ಯ ಸೇವಿಸಿದ ಧನುಷ್, ಲಾಂಗ್ ಡ್ರೈವ್ ಹೊಗಲು ನಿರ್ಧರಿಸಿ, ಅಲ್ಲಿಂದ ಮೈಸೂರು ರೋಡ್ಗೆ ತೆರಳುವಾದ ಈ ಘಟನೆ ನಡೆದಿದೆ ಎನ್ನಲಾಗಿದೆ.
BSY ಅವರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್ : CM Siddaramaiah